129 ಮತ ಪಡೆದು ವಿಶ್ವಾಸ ಮತ ಗೆದ್ದ ನಿತೀಶ್ ಕುಮಾರ್

ಪಾಟ್ನಾ : ಬಿಹಾರದಲ್ಲಿ ಬಿಜೆಪಿಯೊಂದಿಗೆ ಮೈತ್ರಿಯಾಗಿ ಮತ್ತೊಮ್ಮೆ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ನಿತೀಶ್ ಕುಮಾರ್ ಅವರು ವಿಶ್ವಾಸ ಮತ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಲಾಪ ಪ್ರಾರಂಭದಲ್ಲಿಯೇ ಆರ್‌ಜೆಡಿ ಪಕ್ಷದ ಮೂವರು ಶಾಸಕರು ಬೆಂಬಲ ಸೂಚಿಸಿದ್ದಾರೆ. ಒಟ್ಟು 243 ಸ್ಥಾನಗಳಲ್ಲಿ 122 ಶಾಸಕರ ಬೆಂಬಲ ಪಡೆಯಬೇಕಿತ್ತು. ಅದರಲ್ಲಿ ನಿತೀಶ್,129 ಶಾಸಕರ ಬೆಂಬಲವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಮೂಲಕ ತಮ್ಮ ನೇತೃತ್ವದಲ್ಲಿ ಸರ್ಕಾರವನ್ನು ಭದ್ರಪಡಿಸಿಕೊಂಡಿದ್ದಾರೆ. ಸದನದಲ್ಲಿ ಆರ್‌ಜೆಡಿಗೆ ಭಾರಿ ಹಿನ್ನಡೆಯಾಗಿದ್ದು, ಅದರ ಮೂವರು ಶಾಸಕರು ನಿತೀಶ್ ಪಕ್ಷಕ್ಕೆ ಪಕ್ಷಾಂತರ ಮಾಡಿದ್ದಾರೆ. ಆರ್‌ಜೆಡಿ ಶಾಸಕರಾದ ಚೇತನ್ ಆನಂದ್, ಪ್ರಹ್ಲಾದ್ ಯಾದವ್ ಮತ್ತು ನೀಲಂ ದೇವಿ ಅವರು ಆಡಳಿತ ಪಕ್ಷದ ಶಾಸಕರೊಂದಿಗೆ ಸದನದಲ್ಲಿ ಕುಳಿತಿದ್ದರು.