ಬೆಂಗಳೂರು: ಮೆಜೆಸ್ಟಿಕ್‌ನಿಂದ ನೇರಳೆ ಮಾರ್ಗದತ್ತ ಹೆಚ್ಚುವರಿ 15 ಮೆಟ್ರೋ ರೈಲುಗಳ ಸೇರ್ಪಡೆ, ನಾಳೆಯಿಂದ ಸೇವೆ ಲಭ್ಯ

ಬೆಂಗಳೂರು: ಮೆಜೆಸ್ಟಿಕ್‌ನಿಂದ ನೇರಳೆ ಮಾರ್ಗದತ್ತ ಹೆಚ್ಚುವರಿ 15 ಮೆಟ್ರೋ ರೈಲುಗಳ ಸೇರ್ಪಡೆ, ನಾಳೆಯಿಂದ ಸೇವೆ ಲಭ್ಯ

ಬೆಂಗಳೂರು: BMRCL ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದೆ. ನಾಳೆಯಿಂದ ಅಂದರೆ ಜುಲೈ 6ರಿಂದ ನೇರಳೆ ಮಾರ್ಗದಲ್ಲಿ ಮೆಟ್ರೋ ರೈಲುಗಳ ವೇಳಾಪಟ್ಟಿಯನ್ನು ಪರಿಷ್ಕರಿಸಿದ್ದು ಮೆಜೆಸ್ಟಿಕ್ ನಿಲ್ದಾಣದಿಂದ ಹೆಚ್ಚುವರಿ ರೈಲು ಸೇವೆಗಳನ್ನು ಒದಗಿಸಲಾಗುತ್ತಿದೆ. 

ಮೆಜೆಸ್ಟಿಕ್ ನಿಲ್ದಾಣದಿಂದ ಪ್ರಸ್ತುತ 9 ರೈಲುಗಳ ಬದಲಾಗಿ ಹೆಚ್ಚುವರಿಯಾಗಿ 15 ರೈಲುಗಳನ್ನು ಪ್ರಯಾಣಿಕರ ಸೇವೆಗೆ ಒದಗಿಸಲಾಗುವುದು. ಈ 15 ರೈಲುಗಳಲ್ಲಿ 10 ರೈಲುಗಳು ಪಟ್ಟಂದೂರು ಅಗ್ರಹಾರದವರೆಗೆ, ನಾಲ್ಕು ರೈಲು ವೈಟ್ ಫೀಲ್ಡ್ ಮತ್ತು ಒಂದು ರೈಲು ಬೈಯಪ್ಪನಹಳ್ಳಿ ನಿಲ್ದಾಣದವರೆಗೆ ಚಲಿಸಲಿದೆ. 

ಜೊತೆಗೆ, ಬೆಳಗಿನ ಸಮಯದಲ್ಲಿ ರೈಲುಗಳು ಮೆಜೆಸ್ಟಿಕ್‌ನಿಂದ 8:48ರಿಂದ 11:22ರವರೆಗೆ 10 ನಿಮಿಷಗಳ ಹಂತರದಲ್ಲಿ ರೈಲು ಚಲಿಸಲಿವೆ ಹಾಗೂ ಮೆಜೆಸ್ಟಿಕ್ ನಲ್ಲಿ 3.3 ನಿಮಿಷಗಳ ಅವರ್ತನದಲ್ಲಿ ಬೆಳಿಗ್ಗೆ 10:25ರವರೆಗೂ ನಿಯಮಿತವಾಗಿ ಹಾದುಹೋಗುವ ರೈಲುಗಳು ಸಹ ಲಭ್ಯವಿರುತ್ತದೆ ಎಂದು BMRCL ತಿಳಿಸಿದೆ. 

ಇನ್ನು ಪ್ರಯಾಣಿಕರ ಅನುಕೂಲಕ್ಕಾಗಿ 5 ನಿಮಿಷಗಳ ಆವರ್ತನದಲ್ಲಿ ಬೈಯಪ್ಪನಹಳ್ಳಿಯಿಂದ ಸಂಜೆ 4:40ರ ಬದಲಿಗೆ 4:20ಕ್ಕೆ ಮೈಸೂರು ರಸ್ತೆ ನಿಲ್ದಾಣದ ಕಡೆಗೆ ಪ್ರಾರಂಭವಾಗಲಿದೆ. ಹಸಿರು ಮಾರ್ಗದ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು BMRCL ಅಧಿಕೃತವಾಗಿ ತಿಳಿಸಿದೆ.