ಹುಬ್ಬಳ್ಳಿ: ಬೃಹತ್ ರಕ್ತದಾನ ಶಿಬಿರ

ಹುಬ್ಬಳ್ಳಿ: ಬೃಹತ್ ರಕ್ತದಾನ ಶಿಬಿರ

ಹುಬ್ಬಳ್ಳಿ: ವರ್ಡ್ ಸ್ಕ್ವೇರ್ ಫೌಂಡೇಶನ್ ವತಿಯಿಂದ, ಶಾ ದಾಮಜಿ ಜಾದವಜಿ ಛೇಡಾ ಮೆಮೋರಿಯಲ್, ರಾಷ್ಟ್ರೋತ್ಥಾನ ರಕ್ತದಾನ ಭಂಡಾರದ ಸಂಯುಕ್ತ ಆಶ್ರಯದಲ್ಲಿ, ಇಂದು ರಕ್ತದಾನ ಶಿಬಿರವನ್ನು ಹುಬ್ಬಳ್ಳಿಯ ಜೆ.ಕೆ.ಸ್ಕೂಲ್ ಹಿಂಭಾಗದ ವರ್ಡ್ ಸ್ವ್ಕೇರ್ ಸಮುಚ್ಚಯದಲ್ಲಿ ಹಮ್ಮಿಕೊಳ್ಳಲಾಗಿತ್ತು. ಹೌದು, ಕೊರೋನಾ ಹಿನ್ನೆಲೆಯಲ್ಲಿ ಹಲವಾರು ರೋಗಿಗಳು ರಕ್ತ ವಿಲ್ಲದೆ ಪರದಾಡುವ ಪ್ರಸಂಗ ಬಂದೊದಗಿತ್ತು, ಆದ್ದರಿಂದ ರಕ್ತದಾನ ಮಾಡುವುದರಿಂದ ಲಾಭ ಹಾಗೂ ಆರೋಗ್ಯ ಕಾಳಜಿ ವಹಿಸುವ ಉದ್ದೇಶದಿಂದ ನಗರದಲ್ಲಿ ಇಂದು ಬೃಹತ್ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳುವ ಮೂಲಕ ಜಾಗೃತಿ ಮೂಡಿಸಿದರು.