ವಿಜಯಪುರ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣದ ಅಭಿವೃದ್ಧಿಗೆ ₹618.75 ಕೋಟಿ!

ವಿಜಯಪುರ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣದ ಅಭಿವೃದ್ಧಿಗೆ ₹618.75 ಕೋಟಿ!

ವಿಜಯಪುರ: ವಿಜಯಪುರ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣದ ಅಭಿವೃದ್ಧಿಗೆ ಹೆಚ್ಚುವರಿಯಾಗಿ ರೂ. 270 ಕೋಟಿ ಸೇರಿದಂತೆ ಒಟ್ಟು ರೂ. 618.75 ಕೋಟಿ ಅನುದಾನ ನೀಡಲು ರಾಜ್ಯ ಸರಕಾರದಿಂದ ಒಪ್ಪಿಗೆ ಸೂಚಿಸಿದೆ. 

ಈ ವಿಚಾರವನ್ನು ವಾಣಿಜ್ಯ ಹಾಗೂ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ತಮ್ಮ 'ಎಕ್ಸ್' ಖಾತೆಯಲ್ಲ ಹಂಚಿಕೊಂಡಿದ್ದಾರೆ. ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ವಿಜಯಪುರ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣದ ಅಭಿವೃದ್ಧಿಗೆ ಹೆಚ್ಚುವರಿಯಾಗಿ ರೂ. 270 ಕೋಟಿ ಸೇರಿದಂತೆ ಒಟ್ಟು ರೂ. 618.75 ಕೋಟಿಗೆ ಒಪ್ಪಿಗೆ ದೊರೆತಿದೆ ಎಂದು ಅವರು ತಿಳಿಸಿದ್ದಾರೆ. 

ಸಣ್ಣ ವಿಮಾನಗಳು ಮಾತ್ರವಲ್ಲದೆ ಏರ್ ಬಸ್ A 320 ಸೇರಿದಂತೆ ದೊಡ್ಡ ವಿಮಾನಗಳು, ರಾತ್ರಿ ಇಳಿತ, ಹೊಸ ರನ್ವೇ, ಫೈರ್ ಫೈಟಿಂಗ್ ವಾಹನಗಳು, DVOR ನ್ಯಾವಿಗೇಷನ್ ಸಿಸ್ಟಮ್ ಸಹಿತ ಎಲ್ಲಾ ಆಧುನಿಕ ಸೌಲಭ್ಯಗಳೊಂದಿಗೆ ಈ ನಿಲ್ದಾಣವನ್ನು ನಿರ್ಮಿಸಲಾಗುವುದು. ಇದರ ಪ್ರಯೋಜನ ವಿಜಯಪುರ–ಬಾಗಲಕೋಟೆ ಮಾತ್ರವಲ್ಲದೆ ಉತ್ತರ ಕರ್ನಾಟಕ ಭಾಗ ಹಾಗೂ ಮಹಾರಾಷ್ಟ್ರದ ಗಡಿ ಜಿಲ್ಲೆಗಳಿಗೂ ಆಗಲಿದೆ. 

ವಿಶೇಷವಾಗಿ ಕೃಷಿ ಉತ್ಪನ್ನಗಳ ರಫ್ತಿಗೆ ಹೊಸ ದಾರಿ ತೆರೆಯುವ ಮೂಲಕ ರೈತರಿಗೂ ನೆರವಾಗಲಿದೆ. ಭವಿಷ್ಯದ 50 ವರ್ಷಗಳ ಅಗತ್ಯ ತಕ್ಕಂತೆ ಆಧುನಿಕ ವಿಮಾನ ನಿಲ್ದಾಣ ನಿರ್ಮಿಸಲಾಗುವುದು. ಈ ಯೋಜನೆ ಕೈಗಾರಿಕೆಗಳು, ಶೈಕ್ಷಣಿಕ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಗೂ ನೆರವಾಗಲಿದೆ ಎಂದು ಎಂ.ಬಿ ಪಾಟೀಲ್ ತಿಳಿಸಿದ್ದಾರೆ.