ಉದ್ಯೋಗಕ್ಕಾಗಿ ಯುವ ಕಾಂಗ್ರೆಸ್ ಪ್ರತಿಭಟನೆ - ಜಲಫಿರಂಗಿ ಪ್ರಯೋಗ

ಉದ್ಯೋಗಕ್ಕಾಗಿ ಯುವ ಕಾಂಗ್ರೆಸ್ ಪ್ರತಿಭಟನೆ - ಜಲಫಿರಂಗಿ ಪ್ರಯೋಗ

ಭೋಪಾಲ್: ನಿರುದ್ಯೋಗ ಸಮಸ್ಯೆ ವಿರುದ್ಧ ಯುವ ಕಾಂಗ್ರೆಸ್‌ನಿಂದ ಭೋಪಾಲ್ ನಗರದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಪೊಲೀಸರು ಜಲಫಿರಂಗಿ ಅಸ್ತ್ರ ಪ್ರಯೋಗಿಸಿದ್ದಾರೆ. 

ಅಧಿಕಾರಕ್ಕೆ ಬಂದ ಮೊದಲ ಅವಧಿಯ ಒಳಗಾಗಿ 2 ಲಕ್ಷ ಉದ್ಯೋಗಗಳನ್ನು ಸೃ‍ಷ್ಟಿಸುವುದಾಗಿ ಬಿಜೆಪಿ ಹೇಳಿತ್ತು. ಅಧಿಕಾರಕ್ಕೆ ಬಂದ ನಂತರ ಈಗ ಆ ಬಗ್ಗೆ ಮಾತಾಡುತ್ತಲೇ ಇಲ್ಲ. ಮಧ್ಯಪ್ರದೇಶ ಯುವಜನರು ಉದ್ಯೋಗ ಇಲ್ಲದೇ ಭ್ರಮನಿರಸನರಾಗಿದ್ದಾರೆ. ಸರಕಾರ ಕೊಟ್ಟ ಮಾತಿಗೆ ತಕ್ಕಂತೆ ನಡೆದುಕೊಂಡಿಲ್ಲ ಎಂದು ಯುವ ಕಾಂಗ್ರೆಸ್ ನಾಯಕರು ಮಧ್ಯ ಪ್ರದೇಶ ಸರಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. 

ಇದೇ ವೇಳೆ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಜಲಫಿರಂಗಿ ಅಸ್ತ್ರ ಪ್ರಯೋಗಿಸಿದ್ದಾರೆ.