ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ತಮ್ಮ ಅತ್ಯಂತ ನಿಧಾನಗತಿಯ ಅರ್ಧಶತಕ ದಾಖಲಿಸಿದ ಸಂಜು ಸ್ಯಾಮ್ಸನ್

ಅಬುಧಾಬಿ: ಭಾರತ ತಂಡದ ವಿಕೆಟ್ ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್ ಶುಕ್ರವಾರ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ತಮ್ಮ ಅತ್ಯಂತ ನಿಧಾನಗತಿಯ ಅರ್ಧಶತಕ ದಾಖಲಿಸಿದ್ದಾರೆ.
2025ರ ಏಷ್ಯಾ ಕಪ್ ಪಂದ್ಯದಲ್ಲಿ ಓಮನ್ ವಿರುದ್ಧದ ಪಂದ್ಯದಲ್ಲಿ ಸ್ಯಾಮ್ಸನ್ 41 ಎಸೆತಗಳಲ್ಲಿ ಐವತ್ತು ರನ್ ಗಳಿಸಿದರು. ಅವರ ಹಿಂದಿನ ಅಂತರರಾಷ್ಟ್ರೀಯ ಟಿ20 ನಿಧಾನಗತಿಯ ಅರ್ಧಶತಕ ಜುಲೈ 2024ರಲ್ಲಿ ಜಿಂಬಾಬ್ವೆ ವಿರುದ್ಧ 39 ಎಸೆತಗಳಲ್ಲಿ ಬಂದಿತ್ತು. ಸ್ಯಾಮ್ಸನ್ ಒಮಾನ್ ವಿರುದ್ಧ 45 ಎಸೆತಗಳಲ್ಲಿ ಒಟ್ಟು 56 ರನ್ ಗಳಿಸಿದರು
.