ದೆಹಲಿ : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ಪ್ರತಿಷ್ಠಿತ ರಾಷ್ಟ್ರೀಯ ಸ್ಕಾಚ್ ಪ್ರಶಸ್ತಿ - 2023

ದೆಹಲಿ : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ಪ್ರತಿಷ್ಠಿತ ರಾಷ್ಟ್ರೀಯ ಸ್ಕಾಚ್ ಪ್ರಶಸ್ತಿ - 2023

ದೆಹಲಿ : ಸಾರಿಗೆ ಸಂಸ್ಥೆಗಳ ಇತಿಹಾಸದಲ್ಲೆ ಪ್ರಪ್ರಥಮ ಬಾರಿಗೆ ಬೆಂ.ಮ.ಸಾ.ಸಂಸ್ಥೆಯು ಕೋವಿಡ್-19 ಮತ್ತು ಪ್ರಯಾಣಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಸಂಪರ್ಕ ರಹಿತ ಸೇವೆಯಾದ ಡಿಜಿಟಲ್ ಪಾಸ್ ಅನ್ನು ಜಾರಿಗೆ ತಂದಿದೆ. ಡಿಜಿಟಲ್ ಪಾಸ್ ವ್ಯವಸ್ಥೆಯು ನೇರ ಹಣ ವರ್ಗಾವಣೆ, ಗ್ರಾಹಕ ಸ್ನೇಹಿ, ಚಿಲ್ಲರೆ ಸಮಸ್ಯೆ ಹಾಗೂ ಕಾಗದ ರಹಿತ ನೂತನ ತಂತ್ರಜ್ಞಾನದ ಸೇವೆಯಾಗಿದ್ದು, ಮೊಬೈಲ್ ಅಪ್ಲಿಕೇಶನ್ ಮೂಲಕ ಮಾಸಿಕ, ವಾರದ, ದೈನಂದಿನ ಪಾಸುಗಳನ್ನು ಖರೀದಿಸಿ, ನಿಶ್ಚಿಂತೆಯಿಂದ ಪ್ರಯಾಣಿಸಲು ಅನುಕೂಲ ಮಾಡಿಕೊಡುವ ವ್ಯವಸ್ಥೆಯಾಗಿರುತ್ತದೆ. 

ಈ ಸಾಧನೆಯಿಂದ ಸ್ಕಾಚ್ ವತಿಯಿಂದ ಪ್ರತಿಷ್ಠಾಪಿಸಿರುವ ಸ್ಕಾಚ್ ಪ್ರಶಸ್ತಿ- 2023 ರಡಿ, ಬೆಂ.ಮ.ಸಾ.ಸಂಸ್ಥೆಗೆ ಡಿಜಿಟಲ್ ಆರ್ಥಿಕತೆ ಮತ್ತು ಡಿಜಿಟಲ್ ತಂತ್ರಜ್ಞಾನ ವರ್ಗದಲ್ಲಿ ಸಂಸ್ಥೆಯ ಡಿಜಿಟಲ್ ಬಸ್ ಪಾಸ್ ವ್ಯವಸ್ಥೆ ವಿನೂತನ ಉಪಕ್ರಮಗಾಗಿ ರಾಷ್ಟ್ರೀಯ ಪ್ರಶಸ್ತಿ ಲಭಿಸಿರುತ್ತದೆ. ನವದೆಹಲಿಯ ಕಾನ್ಸ್ಟಿಟ್ಯೂಷನ್ ಕ್ಲಬ್ ಆಫ್ ಇಂಡಿಯಾದಲ್ಲಿ ಸ್ಕೋಚ್ ಸಂಸ್ಥೆಯ ಆಯೋಜಿಸಿದ್ದ 96ನೇ ಸ್ಕಾಚ್ ಶೃಂಗಸಭೆಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶ್ರೀಮತಿ ಸುನಿತಾ.ಜೆ, ಸಾರ್ವಜನಿಕ ಸಂಪರ್ಕಾಧಿಕಾರಿಗಳು ಸಂಸ್ಥೆಯ ಪರವಾಗಿ ಪ್ರಶಸ್ತಿ ಸ್ವೀಕರಿಸಿದರು. 

ಸ್ಕಾಚ್ ಒಂದು ಸ್ವತಂತ್ರ ಚಿಂತಕರ ಪ್ರತಿಷ್ಠಿತ ರಾಷ್ಟ್ರೀಯ ಸಂಸ್ಥೆಯಾಗಿದ್ದು, ದೆಹಲಿಯಲ್ಲಿ ತನ್ನ ಪ್ರಧಾನ ಕಛೇರಿ ಹೊಂದಿದೆ. ಸ್ಕಾಚ್ ಇನ್ಸ್ಟಿಟ್ಯೂಟ್ ನೀಡುವ ಶ್ರೇಷ್ಠ ಗೌರವಗಳನ್ನು ಸಂಸ್ಥೆಯ ಅತ್ಯಂತ ಗಮನಾರ್ಹ ಸಾಧನೆಗಳು ಮತ್ತು ಸಮಾಜದ ಮೇಲೆ ಅವುಗಳ ಪ್ರಭಾವದ ವಿಮರ್ಶೆಯಿಂದ ನಿರ್ಧರಿಸಲಾಗುತ್ತದೆ.