Breaking : ರಾಜ್ಯದ ಜನರಿಗೆ ಮತ್ತೊಂದು ಬರೆ - ಪ್ರತಿ ಲೀಟರ್ ಡೀಸೆಲ್ ದರ 2 ರೂ ಏರಿಕೆ, ಮಧ್ಯರಾತ್ರಿಯಿಂದಲೇ ಜಾರಿ

Breaking : ರಾಜ್ಯದ ಜನರಿಗೆ ಮತ್ತೊಂದು ಬರೆ - ಪ್ರತಿ ಲೀಟರ್ ಡೀಸೆಲ್ ದರ 2 ರೂ ಏರಿಕೆ, ಮಧ್ಯರಾತ್ರಿಯಿಂದಲೇ ಜಾರಿ

ಬೆಂಗಳೂರು : ರಾಜ್ಯದ ಜನರಿಗೆ ದರ ಏರಿಕೆಯ ಶಾಕ್ ಮೇಲೆ ಶಾಕ್ ಆಗ್ತಿದೆ. ಹಾಲು, ವಿದ್ಯುತ್ ದರ ಏರಿಕೆ ಬೆನ್ನಲ್ಲೇ ಡೀಸೆಲ್ ಮೇಲಿನ ಸೆಸ್ ದರ ಹೆಚ್ಚಿಸಿ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ನೂತನ ದರ ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ. 

ರಾಜ್ಯ ಸರ್ಕಾರ ಡೀಸೆಲ್‌ ಮೇಲಿನ ಮಾರಾಟ ತೆರಿಗೆಯನ್ನು 18.44% ರಿಂದ 21.17 % ಗೆ ಏರಿಕೆ ಮಾಡಲಾಗಿದೆ. ಸದ್ಯ ರಾಜ್ಯದಲ್ಲಿ ಪ್ರತಿ ಲೀಟರ್‌ ಡೀಸೆಲ್‌ಗೆ 88.93 ರೂ. ದರವಿದೆ. ತೆರಿಗೆ ಏರಿಕೆಯಿಂದ ದರ 90.93 ರೂ.ಗೆ ಆಗಲಿದೆ. 

ಡೀಸೆಲ್ ದರ ಏರಿಕೆಯಿಂದಾಗಿ ಸರಕು ಸಾಗಾಣಿಕೆ ಮಾಡುವ ವಾಹನಗಳಾದ ಟ್ರಕ್‌, ಲಾರಿಗಳು ಡೀಸೆಲ್‌ ಬಳಸುವ ಕಾರಣ ಮುಂದಿನ ದಿನಗಳಲ್ಲಿ ಇದರ ನೇರ ಪರಿಣಾಮ ದಿನ ಬಳಕೆಯ ವಸ್ತುಗಳ ಮೇಲೆ ತಟ್ಟಲಿದೆ. 

ಡೀಸೆಲ್‌ ದರ ಹೆಚ್ಚಳಕ್ಕೆ ವಿಪಕ್ಷಗಳ ತೀವ್ರವಾಗಿ ಆಕ್ಷೇಪಿಸುತ್ತಿವೆ. ಸಾರ್ವಜನಿಕರೂ ಸಹ ಸರ್ಕಾರದ ಬೆಲೆ ಏರಿಕೆ ಕ್ರಮವನ್ನ ಖಂಡಿಸುತ್ತಿದ್ದಾರೆ.