ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಜೊತೆ ಸಿಎಂ ಸಿದ್ದರಾಮಯ್ಯ ಚರ್ಚೆ

ನವದೆಹಲಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ದೆಹಲಿಯಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರನ್ನು ಭೇಟಿಯಾಗಿ ರಾಜ್ಯದಲ್ಲಿ ಬಾಕಿ ಉಳಿದಿರುವ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಬಗ್ಗೆ ಚರ್ಚೆ ನಡೆಸಿದರು.
ರಾಜ್ಯದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ದಿಗಾಗಿ ಪೂರಕ ಪ್ರಸ್ತಾವನೆಗಳನ್ನು ಮಂಜೂರು ಮಾಡಲು ಕೇಂದ್ರ ಸಚಿವರಲ್ಲಿ ಮನವಿ ಮಾಡಿದ್ದಾರೆ. ಪ್ರಮುಖವಾಗಿ ಕೇಂದ್ರ ಸಚವರಿಗೆ ಸಲ್ಲಿಸಿದ ಮನವಿಯಲ್ಲಿ ಈ ಬೇಡಿಕಗಳಿವೆ
1.ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಮಣಿಪಾಲ್ ಆಸ್ಪತ್ರೆ ಜಂಕ್ಷನ್ (ಮೈಸೂರು ನಗರ)ದಲ್ಲಿ ಫ್ಲೈಓವರ್ ನಿರ್ಮಾಣ.
2. 30.35 ಕಿ.ಮೀ. ಉದ್ದದ ಹುಬ್ಬಳ್ಳಿ ಧಾರವಾಡ ಷ್ಟಪಥ ಬೈಪಾಸ್ ನಿರ್ಮಾಣ
3.ರಾ.ಹೆ 369 ಇ( ಸಿಗಂದೂರು ಸೇತುವೆ) ರಲ್ಲಿ ಶರಾವತಿ ಹಿನ್ನೀರಿನ ಮೇಲೆ ಪ್ರಮುಖ ಸೇತುವೆ ನಿರ್ಮಾಣ.
4. ರಾ.ಹೆ.167 ಹಗರಿ-ಜೆಡ್ಚೆರ್ಲಾ ಸೆಕ್ಷನ್ ನಲ್ಲಿ ಕೃಷ್ಣಾ ನದಿ ಮೇಲೆ 180.865 ಕಿ.ಮೀ.ನಲ್ಲಿ ಪ್ರಮುಖ ಸೇತುವೆ ನಿರ್ಮಾಣ.
5.ಹೊಸಪೇಟೆ ಯಿಂದ ಬಳ್ಳಾರಿ ಸೆಕ್ಷನ್ ನ ಹಳೆಯ ರಾ.ಹೆ-63(ಹೊಸ ರಾ.ಹೆ-67) ನ ಕಿ.ಮಿ.340+640 (ಬಳ್ಳಾರಿ ನಗರ ಮಿತಿಯಲ್ಲಿನ ಸುಧಾ ಕ್ರಾಸ್) ನಲ್ಲಿ LC-110E ಬದಲಿಗೆ 2-ಲೇನ್ ROB ನಿರ್ಮಾಣ.
6.ರಾ.ಹೆ.150ಎ ರಲ್ಲಿನ ಸಿಂದಿಗೆರಿ-ಬಳ್ಳಾರಿ ಸೆಕ್ಷನ್ನ ಕಿ.ಮೀ.235.00 ರಿಂದ 254.800ವರೆಗೆ Two Lane with Paved Shoulders ಗೆ ಅಗಲೀಕರಣ ಯೋಜನೆ.
7. ಸಂಚಾರ ದಟ್ಟಣೆಯನ್ನು ಸುಗಮಗೊಳಿಸಲು ಮೈಸೂರಿನ ರಾಷ್ಟ್ರೀಯ ಹೆದ್ದಾರಿ -275ರಲ್ಲಿ 9 ಗ್ರೇಡ್ ಸಪರೇಟರ್ಗಳ ನಿರ್ಮಾಣ.
8. ರಾಷ್ಟ್ರೀಯ ಹೆದ್ದಾರಿ -75 ( ಹಳೆಯ ರಾ.ಹೆ 48) ರ ಶಿರಾಡಿ ಘಾಟ್ ನ 237+000 ರಿಂದ 263+000 ( ಮಾರನಹಳ್ಳಿಯಿಂದ ಅಡ್ಡಹೊಳೆ ಸೆಕ್ಷನ್) ವರೆಗೆ ಸುರಂಗ ನಿರ್ಮಾಣ ಮಾಡುವ ಮೂಲಕ ಮಂಗಳೂರು ಬಂದರು (ದೇಶದ 7 ನೇ ಅತಿ ದೊಡ್ಡ ಬಂದರು) ಮತ್ತು ರಾಜ್ಯ ರಾಜಧಾನಿ ಬೆಂಗಳೂರಿನ ನಡುವೆ ಸಂಪರ್ಕವನ್ನು ಸುಧಾರಿಸುವುದು.
9. ಪುಣೆ- ಬೆಂಗಳೂರು ಗ್ರೀನ್ ಫೀಲ್ಡ್ ಎಕ್ಸ್ ಪ್ರೆಸ್ ವೇ ನ್ನು ಶೀಘ್ರವಾಗಿ ಮಂಜೂರು ಮಾಡುವುದು.
10. ಮುಂಬರಲಿರುವ ವಾರ್ಷಿಕ ಯೋಜನೆ 20205-26 ರಡಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು 24000 ಕೋಟಿಗಳಿಗೆ ಹೆಚ್ಚಿಸಿ ಇಮಂಜೂರು ಮಾಡುವುದು.
11. ಬೆಂಗಳೂರಿ ನಗರದ ಹೆಬ್ಬಾಳ ಜಂಕ್ಷನ್ ನ ರಾಷ್ಟ್ರೀಯ ಹೆದ್ದಾರಿ- 44 ರಲ್ಲಿ ಮೇಲ್ಸೇತುವೆ ನಿರ್ಮಾಣ.
12. ತಾತ್ವಿಕವಾಗಿ ಘೋಷಿತವಾಗಿರುವ ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಆದ್ಯತೆ ಮೇಲೆ ಮೇಲ್ದರ್ಜೆಗೇರಿಸುವುದು.
13. ಬೆಂಗಳೂರು ನಗರದಲ್ಲಿ ಮೈಸೂರು ರಸ್ತೆಯನ್ನು ಸಂಪರ್ಕಿಸುವ ಸುರಂಗದ ನಿರ್ಮಾಣ ( ರಾ.ಹೆ- 275) ಮತ್ತು ಹೊಸೂರು ರಸ್ತೆ ( ರಾ.ಹೆ-48 ಮತ್ತು ರಾ.ಹೆ-75) ( ಎಲೆಕ್ಟ್ರಾನಿಕ್ ಸಿಟಿ) ಮಾರ್ಗವಾಗಿ ತುಮಕೂರು ರಸ್ತೆ (ರಾ.ಹೆ-48), ಬಳ್ಳಾರಿ ರಸ್ತೆ ( ರಾ.ಹೆ-44) ಮತ್ತು ಹಳೆ ಮದ್ರಾಸು ರಸ್ತೆ ( ಹಳೆ ರಾ.ಹೆ -4)
14.ಬೆಳಗಾವಿ ನಗರ ಸಂಚಾರ ದಟ್ಟಣೆಯನ್ನು ಸುಗಮಗೊಳಿಸಲು ಬೆಳಗಾವಿ ನಗರದ ರಾ.ಹೆ-4 ರಲ್ಲಿ ಎಲಿವೇಟೆಡ್ ಕಾರಿಡಾರ್ ನಿರ್ಮಾಣ
15. ಕಲಬುರ್ಗಿ-ವಾಡಿ-ಯಾದಗಿರಿ-ಕೆಂದೆಚೂರ್-ಜಡ್ ಚೇರ್ಲಾ ವಿಭಾಗದಲ್ಲಿ ಚತುಷ್ಪಥ ರಸ್ತೆ ನಿರ್ಮಿಸಿ ರಸ್ತೆ ಅಗಲೀಕರಣ ಕೈಗೊಳ್ಳುವುದು.
16 ರಾಜ್ಯದ ಯಾದಗಿರಿ ಜಿಲ್ಲೆಯಲ್ಲಿ ರಾ.ಹೆ 150ಎ ( ಜೇವರ್ಗಿ- ಚಾಮರಾಜನಗರ ವಿಭಾಗ) ರಲ್ಲಿ ಭೀಮರಾಯನಗುಡಿ ಮತ್ತು ಶಹಪುರ ಪಟ್ಟಣ ಕ್ಕೆ 2 ಎಲ್+ ಪಿಎಸ್ ಗ್ರೀನ್ ಫೀಲ್ಡ್ ಸಂಯೋಜಿತ ಬೈಪಾಸ್ ನಿರ್ಮಾಣ
17 ಕರ್ನಾಟಕ ರಾಜ್ಯದಲ್ಲಿ ಎಸ್ ಪಿ ಯು ಆರ್ ಅಡಿಯಲ್ಲಿ ರಾ.ಹೆ-752ಕೆ ನಿಂದ ರಾ.ಹೆ -65 ವರೆಗೆ ರಾಷ್ಟ್ರೀಯ ಹೆದ್ದಾರಿ ಎಂದು ಘೋಷಿಸುವುದು
18 ಕರ್ನಾಟಕ ರಾಜ್ಯದಲ್ಲಿ ಎಸ್ ಪಿ ಯು ಆರ್ ಅಡಿಯಲ್ಲಿ ದೇವಲ್ ಗಾಣಗಾಪುರದಿಂದ ಪಂಡರಾಪುರವರೆಗಿನ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಎಂದು ಘೋಷಿಸುವುದು.
ಈ 18 ಬೇಡಿಕೆಗಳನ್ನ ಪರಿಗಣಿಸಬೇಕೆಂದು ಕೇಂದ್ರ ಸಚಿವರಲ್ಲಿ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.