ಇರಾನ್‌ನಲ್ಲಿ 4.3 ತೀವ್ರತೆಯ ಭೂಕಂಪ..!

ಇರಾನ್‌ನಲ್ಲಿ 4.3 ತೀವ್ರತೆಯ ಭೂಕಂಪ..!

ಇಸ್ರೇಲ್–ಅಮೆರಿಕ ಜಂಟಿ ದಾಳಿಗಳ ನಡುವೆ, ಇರಾನ್‌ನಲ್ಲಿ ಸಂಭವಿಸಿದ ಭೂಕಂಪ ಸಾಕಷ್ಟು ಅನುಮಾನಗಳನ್ನು ಸೃಷ್ಟಿಸಿದೆ. ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ಪ್ರಕಾರ, ಫಾರ್ಸ್ ಪ್ರಾಂತ್ಯದ ಗೆರಾಶ್ ಪ್ರದೇಶದಲ್ಲಿ ಇಂದು (ಮಂಗಳವಾರ) 4.3 ತೀವ್ರತೆಯ ಭೂಕಂಪ ಸಂಭವಿಸಿದೆ. 

ಇದು ಭೂಮಿಯಿಂದ ಸುಮಾರು 10 ಕಿಮೀ ಆಳದಲ್ಲಿ ಬೆಳಗ್ಗೆ ಸ್ಥಳೀಯ ಸಮಯ 10:24ಕ್ಕೆ ಸಂಭವಿಸಿದೆ. ಈ ಪ್ರದೇಶ ಜಾಗ್ರೋಸ್ ಫೋಲ್ಡ್-ಥ್ರಸ್ಟ್ ಬೆಲ್ಟ್‌ನಲ್ಲಿ ಇರುವುದರಿಂದ ಭೂಕಂಪಗಳು ಸಾಮಾನ್ಯವಾಗಿವೆ ಎಂಬ ಮಾಹಿತಿ ಕೂಡ ಇದೆ. ಆದರೆ, ಇತ್ತೀಚಿನ ಸೈನಿಕ ಉದ್ವಿಗ್ನತೆಯ ಹಿನ್ನೆಲೆ ನೋಡಿದಾಗ, ಇದು ನೈಸರ್ಗಿಕ ಭೂಕಂಪವೇ ಅಥವಾ ಇರಾನ್ ತನ್ನ ಅಣು ಸಾಮರ್ಥ್ಯದ ಬಗ್ಗೆ ಸಂದೇಶ ನೀಡಿದ್ದೇ ಎಂಬ ಅನುಮಾನಗಳು ವ್ಯಕ್ತವಾಗಿವೆ. ಈ ಕುರಿತು ಅಮೆರಿಕ ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದೆ. 

ಇದೇ ವೇಳೆ, ಟೆಹ್ರಾನ್‌ನ ಪರಮಾಣು ಶಕ್ತಿ ಮುಖ್ಯಸ್ಥ ಮೊಹಮ್ಮದ್ ಎಸ್ಲಾಮಿ ಹೇಳಿಕೆಯಂತೆ, ಅಮೆರಿಕಾ ಮತ್ತು ಇಸ್ರೇಲ್ ವಾರಾಂತ್ಯದಲ್ಲಿ ಇರಾನ್‌ನ ನಟಾಂಜ್ ಪರಮಾಣು ಸ್ಥಾವರದ ಮೇಲೆ ಎರಡು ದಾಳಿಗಳನ್ನು ನಡೆಸಿವೆ. ಇನ್ನೊಂದೆಡೆ, ಒಮನ್ ದೇಶದ ಡುಕ್ಮ್ ಬಂದರಿನ ಇಂಧನ ಟ್ಯಾಂಕ್ ಮೇಲೆ ಡ್ರೋನ್ ದಾಳಿ ನಡೆದಿದ್ದು, ದೊಡ್ಡ ಪ್ರಮಾಣದ ಸಾವುನೋವುಗಳು ಸಂಭವಿಸಿಲ್ಲ ಎಂದು ವರದಿಯಾಗಿದೆ. ಒಟ್ಟಿನಲ್ಲಿ, ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮುಂದುವರಿದಿದ್ದು, ಪರಿಸ್ಥಿತಿ ಇನ್ನಷ್ಟು ಗಂಭೀರವಾಗುವ ಸಾಧ್ಯತೆ ಇದೆ.