ಎಟಿಎಂ ಟ್ರಾನ್ಸಾಕ್ಷನ್, ಮೇ 1ರಿಂದ ಶುಲ್ಕ ಹೆಚ್ಚಳ

ಎಟಿಎಂ ಟ್ರಾನ್ಸಾಕ್ಷನ್, ಮೇ 1ರಿಂದ ಶುಲ್ಕ ಹೆಚ್ಚಳ

ನವದೆಹಲಿ : ಎಟಿಎಂನಲ್ಲಿ ಕ್ಯಾಷ್ ವಿತ್ಡ್ರಾಯಲ್ಗೆ ಇಂಟರ್ಚೇಂಜ್ ಶುಲ್ಕ 17 ರೂನಿಂದ 19 ರೂಗೆ ಏರಿಕೆ ಆಗಲಿದೆ. ಈ ಶುಲ್ಕಗಳ ಹೆಚ್ಚಳಕ್ಕೆ ಆರ್ಬಿಐ ಅನುಮೋದನೆ ನೀಡಿದೆ. ಮೇ 1ರಿಂದ ಹೊಸ ಶುಲ್ಕಗಳು ಜಾರಿಗೆ ಬರಲಿವೆ. 

ಬೇರೆ ಬ್ಯಾಂಕ್ಗಳ ಎಟಿಎಂಗಳಲ್ಲಿ ನಿಗದಿ ಮಾಡಿದ ಮಿತಿಗಿಂತ ಹೆಚ್ಚು ಸಂಖ್ಯೆಯಲ್ಲಿ ವಹಿವಾಟು ಮಾಡಿದರೆ ಆಗ ಪ್ರತೀ ಹೆಚ್ಚುವರಿ ವಹಿವಾಟಿಗೂ ಶುಲ್ಕ ವಿಧಿಸಲಾಗುತ್ತದೆ. ಕ್ಯಾಷ್ ಹಿಂಪಡೆಯುವ ವಹಿವಾಟು ಶುಲ್ಕವನ್ನು ಎರಡು ರೂ ನಷ್ಟು ಹೆಚ್ಚಿಸಲಾಗಿದೆ. ಬ್ಯಾಲನ್ಸ್ ಪರಿಶೀನೆ, ಸ್ಟೇಟ್ಮೆಂಟ್ ಪಡೆಯುವುದು ಇತ್ಯಾದಿ ಹಣಕಾಸು ಅಲ್ಲದ ವಹಿವಾಟಿಗೆ ಶುಲ್ಕವನ್ನು ಒಂದು ರೂನಷ್ಟು ಏರಿಸಲಾಗಿದೆ. 

ಎಟಿಎಂ ಶುಲ್ಕ 17 ರೂನಿಂದ 19 ರೂಗೆ ಏರಿಕೆ 

ಬೇರೆ ಬ್ಯಾಂಕ್ನ ಎಟಿಎಂಗೆ ಹೋಗಿ ಕಾರ್ಡ್ ಬಳಸಲು ನಿರ್ಬಂಧಗಳಿವೆ. ಒಂದು ತಿಂಗಳಲ್ಲಿ ಸಾಮಾನ್ಯವಾಗಿ 3ರಿಂದ 5 ಬಾರಿ ಮಾತ್ರ ನೀವು ಬೇರೆ ಬ್ಯಾಂಕ್ ಎಟಿಎಂನಲ್ಲಿ ವಹಿವಾಟು ನಡೆಸಬಹುದು. ಅದನ್ನು ಮೀರಿದರೆ, ಆಗ ಆ ಬ್ಯಾಂಕ್ನವರು ನಿಮ್ಮ ಬ್ಯಾಂಕ್ಗೆ ಇಂಟರ್ಚೇಂಜ್ ಫೀ ವಿಧಿಸುತ್ತವೆ. ಆರ್ಬಿಐ ಇದೇ ಇಂಟರ್ಚೇಂಜ್ ಫೀ ಅನ್ನು ಈಗ ಹೆಚ್ಚಿಸಿರುವುದು. 

ವಹಿವಾಟು ಸಂಖ್ಯೆ ಮಿತಿ ಮೀರಿದ ಬಳಿಕ ಪ್ರತಿಯೊಂದು ಕ್ಯಾಷ್ ವಿತ್ಡ್ರಾಯಲ್ಗೂ ಇಂಟರ್ಚೇಂಜ್ ಶುಲ್ಕ 17 ರೂನಿಂದ 19 ರೂಗೆ ಹೆಚ್ಚಿಸಲಾಗಿದೆ. ನಾನ್ ಫೈನಾನ್ಷಿಯಲ್ ಟ್ರಾನ್ಸಾಕ್ಷನ್ಗೆ ಶುಲ್ಕವನ್ನು 6 ರೂನಿಂದ 7 ರೂಗೆ ಹೆಚ್ಚಿಸಲಾಗಿದೆ. ಮೇ 1ರಿಂದ ಈ ಹೊಸ ದರಗಳು ಜಾರಿಗೆ ಬರುತ್ತವೆ.