IPL 2021 : ಕ್ವಾಲಿಫೈಯರ್ , ಎಲಿಮಿನೇಟರ್ ಪಂದ್ಯಗಳತ್ತ ಎಲ್ಲರ ಚಿತ್ತ

14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಯಲ್ಲಿ 56 ಲೀಗ್ ಪಂದ್ಯಗಳಿಗೆ ತೆರೆಬಿದ್ದಿದ್ದು, ಇನ್ನುಂದೆ ಕ್ವಾಲಿಫೈಯರ್ ಪಂದ್ಯಗಳು ನಡೆಯಲಿದೆ. ಡೆಲ್ಲಿ ಕ್ಯಾಪಿಟಲ್ಸ್ ಚೆನ್ನೈ ಸೂಪರ್ ಕಿಂಗ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಈ ಬಾರಿ ಕಪ್ ಗೆಲ್ಲುವ ರೇಸ್ ನಲ್ಲಿದೆ.
ಮೊದಲ ಕ್ವಾಲಿಫೈಯರ್ ನಲ್ಲಿ ಪಾಯಿಂಟ್ ಟೇಬಲ್ ನಲ್ಲಿ ಮೊದಲ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಎರಡನೇ ಸ್ಥಾನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿ ಆಗಲಿದೆ. ಇಲ್ಲಿ ಗೆದ್ದ ತಂಡ ನೇರವಾಗಿ ಫೈನಲ್ ಗೆ ಲಗ್ಗೆಯಿಡಲಿದೆ. ಇನ್ನು ಎಲಿಮಿನೇಟರ್ ಪಂದ್ಯದಲ್ಲಿ ಆರ್ ಸಿಬಿ ಮತ್ತು ಕೆಕೆಆರ್ ಸೆಣೆಸಾಟ ನಡೆಸಲಿದ್ದು, ಇಲ್ಲಿ ಸೋತ ತಂಡ ನೇರವಾಗಿ ಟೂರ್ನಿಯಿಂದ ಹೊರಬಿದ್ದರೆ ಗೆದ್ದ ತಂಡ ಮೊದಲ ಕ್ವಾಲಿಫೈಯರ್ ನಲ್ಲಿ ಸೋತ ತಂಡದೊಂದಿಗೆ ಫೈನಲ್ ಗೇರಲು ಹೋರಾಟ ನಡೆಸಬೇಕಿದೆ.
ಡೆಲ್ಲಿ ಮತ್ತು ಚೆನ್ನೈ ತಂಡಗಳು ಮೊದಲ ಕ್ವಾಲಿಫೈಯರ್ ನಲ್ಲಿ ಅಕ್ಟೋಬರ್ 10 ಭಾನುವಾರದಂದು ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮುಖಾಮುಖಿ ಆಗಲಿದೆ. ಆರ್ ಸಿಬಿ ಮತ್ತು ಕೆಕೆಆರ್ ಅಕ್ಟೋಬರ್ 11 ರಂದು ಎಲಿಮಿನೇಟರ್ ಪಂದ್ಯದಲ್ಲಿ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಸೆಣೆಸಾಟ ನಡೆಸಲಿದೆ.
ಕ್ವಾಲಿಫೈಯರ್ 2 ಪಂದ್ಯ ಅ. 13 ರಂದು ನಡೆದರೆ ಅಂತಿಮ ಫೈನಲ್ ಕದನ ಅ. 15 ರಂದು ನಡೆಯಲಿದೆ.