"ತಾರೆ ಜಮೀನ್ ಪರ್" ಆಮೀರ್ ಖಾನ್ ಮುಂದಿನ ಚಿತ್ರದ ಟೈಟಲ್ ರಿವೀಲ್

2023ರ ಕೊನೆಯ ಹೊತ್ತಿಗೆ ಆಮೀರ್ ಖಾನ್ ತಮ್ಮ ಮುಂದಿನ ಚಿತ್ರವನ್ನು ಘೋಷಿಸಿದ್ದಾರೆ. ಅದಕ್ಕೆ ಅವರು ಕೊಟ್ಟಿರುವ ಶೀರ್ಷಿಕೆ "ಸಿತಾರೆ ಜಮೀನ್ ಪರ್" ಎಂದು. ಚಿತ್ರ "ತಾರೆ ಜಮೀನ್ ಪರ್" ಅನ್ವೇಷಿಸಿದ ವಿಷಯದ ಮೇಲೆ ಇರುತ್ತದೆ ಎಂದು ಹೇಳಿದ್ದಾರೆ. 

ಅಮೀರ್ ಖಾನ್ ಅಭಿನಯದ 2007 ರಲ್ಲಿ ಬಿಡುಗಡೆಯಾಗಿ ಯಶಸ್ಸು ಪಡೆದ ಚಿತ್ರ 'ತಾರೆ ಜಮೀನ್ ಪರ್', ತಮ್ಮ ಭಾವನಾತ್ಮಕ ನಟನೆ ಮತ್ತು ಚೊಚ್ಚಲ ನಿರ್ದೇಶನದ ಚಿತ್ರವದು. ಅದು ಚಿತ್ರಪ್ರೇಮಿಗಳಲ್ಲಿ ಸಾಕಷ್ಟು ಪ್ರಭಾವ ಬೀರಿತ್ತು. 

ಇತ್ತೀಚೆಗೆ ಅಮೀರ್ ಖಾನ್ ನಟನೆ, ನಿರ್ದೇಶನಕ್ಕೆ ಬ್ರೇಕ್ ಹಾಕಿದ್ದರು. ಇತ್ತೀಚಿನ ವರ್ಷಗಳಲ್ಲಿ ಆಮಿರ್ ಖಾನ್ ಅವರಿಗೆ ನಿರೀಕ್ಷಿತ ಪ್ರಮಾಣದ ಗೆಲುವು ಸಿಕ್ಕಿಲ್ಲ. ‘ಲಾಲ್ ಸಿಂಗ್ ಛಡ್ಡಾ’ ಸಿನಿಮಾ ಸೋತಿತು. ಇದೀಗ 'ಸಿತಾರೆ ಜಮೀನ್ ಪರ್' ನಿಮಗೆ ನನ್ನ 'ತಾರೆ ಜಮೀನ್ ಪರ್' ಚಿತ್ರ ನೆನಪಿರಬೇಕು. ಈ ಚಿತ್ರದ ಹೆಸರು 'ಸಿತಾರೆ ಜಮೀನ್ ಪರ್' ಏಕೆಂದರೆ ನಾವು ಅದೇ ವಿಷಯದೊಂದಿಗೆ ಹತ್ತು ಹೆಜ್ಜೆ ಮುಂದೆ ಹೋಗುತ್ತಿದ್ದೇವೆ ಎಂದು ಹೇಳಿದ್ದಾರೆ. ಅಮೀರ್ ಖಾನ್, "ಸಿತಾರೆ ಜಮೀನ್ ಪರ್" ಜನರನ್ನು ನಗಿಸುತ್ತದೆ ಮತ್ತು ಅಳುವಂತೆ ಮಾಡುತ್ತದೆ ಎಂದು ಹೇಳಿದ್ದಾರೆ. 

ವಿಷಯ ಒಂದೇ, ಅದಕ್ಕಾಗಿಯೇ ನಾವು ಈ ಹೆಸರನ್ನು ಚಿಂತನಶೀಲವಾಗಿ ಆರಿಸಿದ್ದೇವೆ. ನಾವೆಲ್ಲರೂ ನ್ಯೂನತೆಗಳನ್ನು ಹೊಂದಿದ್ದೇವೆ. ಆದರೆ, ವಿಶೇಷವಾದದ್ದನ್ನು ಹೊಂದಿದ್ದೇವೆ, ಆದ್ದರಿಂದ ನಾವು ಈ ವಿಷಯವನ್ನು ಮುಂದಕ್ಕೆ ತೆಗೆದುಕೊಳ್ಳುತ್ತಿದ್ದೇವೆ ಎಂದು ಆಮೀರ್ ಹೇಳಿದ್ದಾರೆ.