ಕರ್ನಾಟಕ ರಾಜ್ಯ ಬಜೆಟ್ 2024-25: ಬಜೆಟ್ ಹೈಲೆಟ್ಸ್ ಇಲ್ಲಿವೆ ನೋಡಿ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸುತ್ತಿವ 2024–25ನೇ ಸಾಲಿನ ರಾಜ್ಯ ಬಜೆಟ್‌ನ ಪ್ರಮುಖ ಅಂಶಗಳು ಇಲ್ಲಿವೆ ನೋಡಿ.
* ಮಾಜಿ ದೇವದಾಸಿಯರ ಕಲ್ಯಾಣಕ್ಕಾಗಿ ಮಾಸಾಶನ 1500 ರೂ.ಗಳಿಂದ 2000ಕ್ಕೆ ಏರಿಕೆ
* ಎಸ್‌ಸಿ/ ಎಸ್‌ಟಿ, ಅಲ್ಪಸಂಖ್ಯಾತರ ವಸತಿ ಶಾಲೆಗಳು ಮತ್ತು ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ 2,710 ಕೋಟಿ.
* ಗ್ಯಾರಂಟಿ ಯೋಜನೆ ಮೂಲಕ ಪ್ರತಿ ಕುಟುಂಬಕ್ಕೆ 50-55 ಸಾವಿರ ಒದಗಿಸಲಾಗುತ್ತದೆ.
* ಕೃಷಿ ಭಾಗ್ಯ ಯೋಜನೆ ಮುಂದುವರಿಕೆಗೆ 200 ಕೋಟಿ ರೂ.
* ನಮ್ಮ ಮಿಲೆಟ್ ಎಂಬ ಹೊಸ ಯೋಜನೆ
* ನರೇಗಾ ಯೋಜನೆಯಡಿ ಪ್ರತಿ ವರ್ಷ ಒಂದು ಸಾವಿರದಂತೆ ಐದು ವರ್ಷದಲ್ಲಿ ಐದು ಸಾವಿರ ಸರೋವರ ನಿರ್ಮಾಣ ಗುರಿ.
* E Sap ತಂತ್ರಾಂಶದ ಸೌಲಭ್ಯ ರಾಜ್ಯದ ರೈತರಿಗೆ ಪರಿಚಯಿಸಲು ಕ್ರಮ
* ಕೃಷಿ ಇಲಾಖೆ ಅಧೀನದಲ್ಲಿ ಪ್ರತ್ಯೇಕ ಆಹಾರ ಸಂರಕ್ಷಣಾ ಆಯುಕ್ತರ ಕಚೇರಿ ಸ್ಥಾಪನೆ
* ಬೆಂಗಳೂರಿನಲ್ಲಿ ಸುಸಜ್ಜಿತ ಅಂತರಾಷ್ಟ್ರೀಯ ಮಟ್ಟದ ವಾಣಿಜ್ಯ ಪುಷ್ಪ ಮಾರುಕಟ್ಟೆ
* ವಿಜಯಪುರದ ಅಲಮೇಲದಲ್ಲಿ ತೋಟಗಾರಿಕಾ ಕಾಲೇಜು
* ಹಸು, ಎಮ್ಮೆ ಖರೀದಿಗಾಗಿ ಸಾಲ. ಸಕಾಲದಲ್ಲಿ ಮರು ಪಾವತಿಸುವ ಮಹಿಳೆಯರಿಗೆ 6% ಬಡ್ಡಿ
* ರಾಜ್ಯದ ಶಿಥಿಲಾವಸ್ಥೆಯಲ್ಲಿರುವ 200 ಪಶುವೈದ್ಯ ಸಂಸ್ಥೆಗೆ 100 ಕೋಟಿ ರೂ.
* ಭದ್ರವಾತಿಯಲ್ಲಿ ಅತ್ಯಾಧುನಿಕ ಮಿನುಮಾರುಕಟ್ಟೆ
* ರಾಜ್ಯ ಇದೇ ಮೊದಲಿಗೆ 7ಕೋಟಿ ವೆಚ್ಚದಲ್ಲಿ ಸಮುದ್ರ ಆಂಬ್ಯುಲೆನ್ಸ್
* ಬಡ್ಡಿ ರಹಿತ ಅಲ್ಪಾವಧಿ ಸಾಲ 3ರಿಂದ 5ಕ್ಕೆ. ಮಧ್ಯಮಾವಧಿ ಮತ್ತು ಧೀರ್ಘಾವದಿ ಸಲ 3%ಬಡ್ಡಿದರದಲ್ಲಿ 10-15 ಲಕ್ಷಕ್ಕೆ ಏರಿಸಲು ಕ್ರಮ
* ಯಲಬುರ್ಗ, ಬಸವನಬಾಗೇವಾಡಿ, ರಾಣೆಬೆನ್ನೂರು, ಬಳ್ಳಾರಿ, ಗದಗದಲ್ಲಿ 50 ಕೋಟಿ ವೆಚ್ಚದಲ್ಲಿ ಕೋಲ್ಡ್ ಸ್ಟೋರೇಜ್ ನಿರ್ಮಾಣ. ರಾಯಚೂರು ಮತ್ತು ಮೈಸೂರಿನಲ್ಲಿ ತಲಾ 40 ಕೋಟಿ ವೆಚ್ಚದಲ್ಲಿ ಕೋಲ್ಡ್ ಸ್ಟೋರೇಜ್ ನಿರ್ಮಾಣ.
* ಗಣಿತ ವಿಷಯಲ್ಲಿ ಆಸಕ್ತಿ ಮಕ್ಕಳಿಗೆ ಮೂಡಿಸಲು ರಿ-ಠಿಚಿಟ ಸಂಸ್ಥೆ ಸಹೋಯಗದಲ್ಲಿ ವಿಶೇಷ ಕಾರ್ಯಕ್ರಮ
* ಕಲಿಕೆಯಲ್ಲಿ ಹಿಂದುಳಿದ 6-7ನೇ ತರಗತಿ ವಿದ್ಯಾರ್ಥಿಗಳಿಗೆ ಕಲಿಕಾ ಸಾಮರ್ಥ್ಯ ಹೆಚ್ಚಿಸಲು ಹತ್ತು ಕೋಟಿ ವೆಚ್ಚದಲ್ಲಿ ಮರುಸಿಂಚನ ಕಾರ್ಯಕ್ರಮ
* ಸರ್ಕಾರಿ ಪ್ರೌಡಶಾಲೆಯಲ್ಲಿ ವಿಜ್ಞಾನ ಪ್ರಯೋಗಾಲಯ. ಕಂಪ್ಯೂಟರ್ ಲ್ಯಾಬ್. ಇಂಟರ್ನೆಟ್ ಸೌಲಭ್ಯಕ್ಕೆ 50 ಕೋಟಿ
* ಎರಡು ಸಾವಿರ ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ದ್ವಿಭಾಷ ಶಾಲೆಗಗಳಾಗಿ ಮರ್ಪಾಡು
* ರಾಜ್ಯದ 30 ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಹಾಗೂ ಮಹಿಳಾ ಪಾಲಿಟೆಕ್ನಿಗ್ ಕಾಲೇಜುಗಳಿಗೆ 30ಕೋಟಿ
* ಬೆಂಗಳೂರಿನ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಮಕ್ಕಳ ಆಸ್ಪತ್ರೆ ಕಟ್ಟಡ ಮತ್ತು ಮೂಲಸೌಕರ್ಯಕ್ಕೆ 150ಕೋಟಿ
*ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ 50 ಹೊಸ ರಕ್ತ ಶೇಖರಣ ಘಟಕ ಸ್ಥಾಪನೆ