ಹುಬ್ಬಳ್ಳಿ : ಪೊಲೀಸ್ ಆಯುಕ್ತರಾಗಿ ರಮಣ್ ಗುಪ್ತಾ ಅಧಿಕಾರ ಸ್ವೀಕಾರ

ಹುಬ್ಬಳ್ಳಿ : ಪೊಲೀಸ್ ಆಯುಕ್ತರಾಗಿ ರಮಣ್ ಗುಪ್ತಾ ಅಧಿಕಾರ ಸ್ವೀಕಾರ

ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಕಮೀಷನರೇಟ್‌ಗೆ ಪೊಲೀಸ್ ಆಯುಕ್ತರಾಗಿ ರಮಣ್ ಗುಪ್ತಾ ನಿಯೋಜನೆಗೊಂಡಿದ್ದು, ಇಂದು ಆಯುಕ್ತರ ಕಚೇರಿಯಲ್ಲಿ ಅಧಿಕಾರ ಸ್ವೀಕಾರ ಮಾಡಿದರು. 

ಲಾಭುರಾಮ್ ಅವರನ್ನು ಬಡ್ತಿ ನೀಡಿ ಐಜಿಪಿ ಇಂಟಲಿಜೆನ್ಸ್ ವಿಭಾಗಕ್ಕೆ ವರ್ಗಾವಣೆ ಮಾಡಿದ ಬೆನ್ನಲ್ಲೇ ರಮಣ್ ಗುಪ್ತಾ ನಿಯೋಜನೆ ಮಾಡಲಾಗಿದೆ. ಈ ಹಿಂದೇ ಕಮೀಷನರ್ ಆಗಿದ್ದ ಲಾಭುರಾಮ್ ಅವರು ಅಧಿಕಾರ ಹಸ್ತಾಂತರ ಮಾಡುವ ಮೂಲಕ ನೂತನ ಕಮೀಷನರ್‌ಗೆ ಅಭಿನಂದನೆ ಸಲ್ಲಿಸಿದರು.