ಹೆಣ್ಮಕ್ಳು ಬಿಕಿನಿ,ಜೀನ್ಸ್ ಬೇಕಾದ ಉಡುಗೆ ಧರಿಸಿ : ಹಿಜಾಬ್ ಪರ ಬ್ಯಾಟ್ ಬೀಸಿದ ಪ್ರಿಯಾಂಕಾ

ಹೆಣ್ಮಕ್ಳು ಬಿಕಿನಿ,ಜೀನ್ಸ್ ಬೇಕಾದ ಉಡುಗೆ ಧರಿಸಿ : ಹಿಜಾಬ್ ಪರ ಬ್ಯಾಟ್ ಬೀಸಿದ ಪ್ರಿಯಾಂಕಾ

ದೆಹಲಿ : ರಾಜ್ಯದಲ್ಲಿ ಸಮವಸ್ತ್ರ ಸಮರ ಮುಂದುವರೆದಿದೆ. ಸದ್ಯ ಹಿಜಾಬ್ ವಿವಾದ ರಾಜಕೀಯ ತಿರುವು ಪಡೆದುಕೊಂಡಿರುವುದು ದುರಂತವೇ ಸರಿ. ಕೆಲವರು ಹಿಜಾಬ್ ಬೆಂಬಲಿಸಿದರೆ ಇನ್ನು ಕೆಲವರು ಶಾಲೆಯಲ್ಲಿ ಎಲ್ಲರೂ ಸಮಾನರು ಹಾಗಾಗಿ ಎಲ್ಲರಿಗೂ ಒಂದೇ ರೂಲ್ಸ್ ಎನ್ನುತ್ತಿದ್ದಾರೆ. ಇದೇ ವಿಚಾರಕ್ಕೆ ವಿದ್ಯಾರ್ಥಿಗಳ ಮಧ್ಯೆ ಗದ್ದಲ, ಗಲಾಟೆ ಉಂಟಾದ ಬೆನ್ನಲ್ಲೇ ರಾಜ್ಯ ಸರ್ಕಾರ ಇಂದಿನಿಂದ 3 ದಿನ ಶಾಲಾ ಕಾಲೇಜುಗಳಿಗೆ ರಜೆ ಕೂಡಾ ಘೋಷಿಸಿದೆ. ಸದ್ಯ ಹಿಜಾಬ್ ಗೆ ಬೆಂಬಲ ಸೂಚಿಸುವಂತೆ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ತಾನು ಏನನ್ನು ಧರಿಸಬೇಕು ಎಂಬುದನ್ನು ನಿರ್ಧರಿಸುವುದು ಮಹಿಳೆಯ ಹಕ್ಕು, ಇಷ್ಟದ ವಸ್ತ್ರ ಧರಿಸುವಿಕೆ ಹೆಣ್ಣು ಮಕ್ಕಳ ಇಚ್ಛೆಗೆ ಬಿಟ್ಟಿದ್ದು ಅವಳು ಬಿಕಿನಿಯಾದರೂ ಹಾಕಲಿ,ಘೂಂಘಟ ಆದರೂ ಧರಿಸಲಿ, ಜೀನ್ಸ್ ಬೇಕಾದರೂ ಹಾಕಿಕೊಳ್ಳಲಿ ಎಂದಿದ್ದಾರೆ. ಉತ್ತರಪ್ರದೇಶದ ಮಹಿಳಾ ಸಬಲೀಕರಣದ ಕಾಂಗ್ರೆಸ್ ಚುನಾವಣಾ ಘೋಷವಾಕ್ಯ 'Ladki Hun, Lad Sakti Hun' (ನಾನು ಹುಡುಗಿಯಾದ್ರು ಹೋರಾಟ ಮಾಡುತ್ತೇನೆ) ಎನ್ನುವುದಕ್ಕೆ ರಾಜ್ಯದ ಹಿಜಾಬ್ ವಿಷಯವನ್ನು ಪ್ರಿಯಾಂಕಾ ಜೋಡಿಸಿದ್ದಾರೆ. ಪ್ರತಿಭಟನೆ ನಿರತ ವಿದ್ಯಾರ್ಥಿಗಳಿಗೆ ಕಾಂಗ್ರೆಸ್ ಬೆಂಬಲ ನೀಡುತ್ತಿದ್ದು, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಶಶಿ ತರೂರ್ ಈ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಹಿಜಾಬ್ ಶಿಕ್ಷಣದ ಹಾದಿಯಲ್ಲಿ ಬರಲು ಬಿಡುವುದರಿಂದ ಭಾರತದ ಹೆಣ್ಣು ಮಕ್ಕಳ ಭವಿಷ್ಯವನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ರಾಹುಲ್ ಗಾಂಧಿ ಈ ಹಿಂದೆ ಕರ್ನಾಟಕದ ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಬೆಂಬಲಿಸಿದ್ದರು.