ಅಪಾರ್ಟ್ಮೆಂಟ್ ನಲ್ಲಿ ಅಗ್ನಿ ಅವಘಡ ಅಮ್ಮ ಮಗಳು ಸಜೀವ ದಹನ

ಅಪಾರ್ಟ್ಮೆಂಟ್ ನಲ್ಲಿ ಅಗ್ನಿ ಅವಘಡ ಅಮ್ಮ ಮಗಳು ಸಜೀವ ದಹನ

ಬೆಂಗಳೂರು: ದೇವರಚಿಕ್ಕನಹಳ್ಳಿಯ ಆಶ್ರಿತ್ ಆ್ಯಸ್ಪೈರ್ ಎಂಬ ಅಪಾರ್ಟ್ ಮೆಂಟ್ ನಲ್ಲಿಯ ಬೆಂಕಿಯ ಅನಾಹುತದಲ್ಲಿ ಅಮ್ಮ ಮಗಳು ಸಜೀವ ದಹನವಾಗಿದ್ದಾರೆ. ಮೃತಪಟ್ಟವರು ಆಂಧ್ರಪ್ರದೇಶ ಮೂಲದ ಲಕ್ಷ್ಮೀದೇವಿ (82) ಹಾಗೂ ಅವರ ಪುತ್ರಿ ಭಾಗ್ಯರೇಖಾ (59). ಎಂದು ಗುರುತಿಸಲಾಗಿದೆ. ನಿನ್ನೆಯಷ್ಟೇ ವಿದೇಶ ಪ್ರವಾಸ ಮುಗಿಸಿ ವಾಪಸ್ ಆಗಿದ್ದ ಇವರು ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದು ನಿಜಕ್ಕೂ ಖೇಧಕರ ಸಂಗತಿ. ಕಣ್ಣ ಮುಂದೆಯೇ ಬೆಂಕಿಯಲ್ಲಿ ಒದ್ದಾಡುತ್ತಿರುವ ದೃಶ್ಯಗಳು ನಿಜಕ್ಕೂ ಕರುಳು ಹಿಂಡುವಂತಿತ್ತು. ಎಲ್ಲರು ಇದರೂ ಇವರನ್ನು ಕಾಪಾಡಲು ಸಾಧ್ಯವಾಗಲಿಲ್ಲ.