ಎಕ್ಸಿಟ್ ಪೋಲ್ ಎಫೆಕ್ಟ್: ಷೇರು ಮಾರುಕಟ್ಟೆಯಲ್ಲಿ ಗೂಳಿಯ ಅಬ್ಬರ - ಸೆನ್ಸೆಕ್ಸ್ 2,093.53 ಪಾಯಿಂಟ್ ಏರಿಕೆ

ಮುಂಬೈ: ಲೋಕಸಭೆ ಚುನಾವಣೆಯ ಮತದಾನೋತ್ತರ ಸಮೀಕ್ಷೆಗಳು, ಭಾರತದ ಜಿಡಿಪಿ ಬೆಳವಣಿಗೆ ಮತ್ತು ಸಕಾರಾತ್ಮಕ ಜಾಗತಿಕ ಮಾರುಕಟ್ಟೆ ಸೂಚನೆಗಳ ಪರಿಣಾಮ ಇಂದು (ಜೂನ್ 3) ಭಾರತೀಯ ಷೇರು ಮಾರುಕಟ್ಟೆಯಲ್ಲಿ ಗೂಳಿಯ ಅಬ್ಬರ ಜೋರಾಗಿದೆ.
ಸೆನ್ಸೆಕ್ಸ್ 2,093.53 ಪಾಯಿಂಟ್ ಏರಿಕೆಯಾಗಿ 76,054.84ಕ್ಕೆ ತಲುಪಿದ್ದರಿಂದ ಬೆಂಚ್‌ಮಾರ್ಕ್ ಸೂಚ್ಯಂಕಗಳು ಪೂರ್ವ-ಆರಂಭಿಕ ಸೆಷನ್‌ನಲ್ಲಿ ಬಲವಾಗಿ ವಹಿವಾಟು ನಡೆಸುತ್ತಿವೆ. ನಿಫ್ಟಿ 798.60 ಪಾಯಿಂಟ್ ಏರಿಕೆಯಾಗಿ 23,329.30ಕ್ಕೆ ತಲುಪಿದೆ.
ಶುಕ್ರವಾರ, ದೇಶೀಯ ಇಕ್ವಿಟಿ ಸೂಚ್ಯಂಕಗಳು ಸಣ್ಣ ಲಾಭಗಳೊಂದಿಗೆ ಮುಚ್ಚಲ್ಪಟ್ಟವು, ಐದು ದಿನಗಳ ನಷ್ಟದ ಸರಣಿಯನ್ನು ಕೊನೆಗೊಳಿಸಿದ್ದವು. ಸೆನ್ಸೆಕ್ಸ್ 75.71 ಅಂಕಗಳ ಏರಿಕೆಯೊಂದಿಗೆ 73,961.31ಕ್ಕೆ ಕೊನೆಗೊಂಡರೆ, ನಿಫ್ಟಿ 50 42.05 ಅಂಕಗಳು ಅಥವಾ 0.19% ಏರಿಕೆಯಾಗಿ 22,530.70ಕ್ಕೆ ಸ್ಥಿರವಾಗಿತ್ತು.