ಮೋದಿಮಯವಾದ ಜಾಲಹಳ್ಳಿ ಕ್ರಾಸ್

ಮೋದಿಮಯವಾದ ಜಾಲಹಳ್ಳಿ ಕ್ರಾಸ್

ಬೆಂಗಳೂರು : ಚಂದ್ರಯಾನ-3 ಯಶಸ್ವಿಗೊಂಡ ಹಿನ್ನೆಲೆ ಅದಕ್ಕೆ ಕಾರಣೀಭೂತರಾದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳನ್ನು ಕಂಡು ಅಭಿನಂದನೆ ಸಲ್ಲಿಸಲು ಬೆಂಗಳೂರಿಗೆ ಆಗಮಿಸುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಇಸ್ರೋ ಕೇಂದ್ರವಿರುವ ಜಾಲಹಳ್ಳಿಕ್ರಾಸ್ ಬಳಿ ನಸುಕಿನ ಜಾವ 3.30 ರಿಂದಲೇ ಜನಸ್ತೋಮ ನೆರೆದಿದ್ದು ಕಂಡು ಬಂತು. 

ಹೆಚ್ ಎಎಲ್ ವಿಮಾನ ನಿಲ್ದಾಣದಿಂದ ರಸ್ತೆ ಮಾರ್ಗವಾಗಿ ಆಗಮಿಸಲಿರುವ ನೆಚ್ಚಿನ ಪ್ರಧಾನಿಯವರನ್ನು ಕಣ್ತುಂಬಿಕೊಳ್ಳಲೆಂದು ವಿವಿಧೆಡೆಗಳಿಂದ ಆಗಮಿಸಿದ್ದ ಜನಸಾಮಾನ್ಯರು ಮತ್ತು ಅಪಾರ ಸಂಖ್ಯೆಯಲ್ಲಿ ಜಮಾಯಿಸಿದ್ದ ಬಿಜೆಪಿ ಕಾರ್ಯಕರ್ತರ ಕೈಯಲ್ಲಿ ತ್ರಿವರ್ಣ ಬಾವುಟಗಳು ರಾರಾಜಿಸುವ ಮೂಲಕ ರಾಷ್ಟ್ರ ಪ್ರೇಮ ವ್ಯಕ್ತವಾದಂತಿತ್ತು. 

 

ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಪರ ಘೋಷಣೆ ಮುಗಿಲು ಮುಟ್ಟುವಂತಿತ್ತು. ಮುಂಬರುವ 2024 ಕ್ಕೂ ನಾವು ಮೋದಿಯವರಿಗೇ ಓಟ್ ಹಾಕಿ ಬಿಜೆಪಿ ಪಕ್ಷವನ್ನು ಗೆಲ್ಲಿಸುತ್ತೇವೆ. ಮೋದಿಯವರೇ ಮತ್ತೆ ಈ ದೇಶದ ಪ್ರಧಾನಿಯಾಗುವಂತೆ ಮಾಡುತ್ತೇವೆ. ಇನ್ನು, 2024 ರ ತರುವಾಯವೂ ಎದುರಾಗುವ ಚುನಾವಣೆಯಲ್ಲಿ ಬಿಜೆಪಿಯನ್ನೇ ಗೆಲ್ಲಿಸುತ್ತೇವೆ. ಆಗ ಮೋದಿಯವರ ಸ್ಥಾನವನ್ನು ಯೋಗಿ ಅವರು ತುಂಬುತ್ತಾರೆ ಅಂತಾ ಹಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.