ಇನ್ಮುಂದೆ ವಾಟ್ಸ್‌ಆ್ಯಪ್ ಮೂಲಕವೇ ಅಂಚೆ ಹಾಗೂ ಅಂಚೆ ಬ್ಯಾಂಕ್ ಸೇವೆ

ನವದೆಹಲಿ: ಇನ್ಮುಂದೆ ಅಂಚೆ ಇಲಾಖೆಯ ಹಲವಾರು ಸೇವೆಗಳು ಡಿಜಿಟಲೀಕರಣ ಹೊಂದಲಿದ್ದು ವಾಟ್ಸ್‌ಆ್ಯಪ್ ಮೂಲಕ ಸಾರ್ವಜನಿಕರಿಗೆ ದೊರೆಯಲಿವೆ.
ಇಂಡಿಯಾ ಪೋಸ್ಟ್ ಮತ್ತು ಪೋಸ್ಟಲ್ ಬ್ಯಾಂಕಿಂಗ್ ಸೇವೆಗಳನ್ನು ಡಿಜಿಟಲ್ ರೂಪದಲ್ಲಿ ವಾಟ್ಸ್‌ಆ್ಯಪ್ ಮೂಲಕ ನೀಡಲು ಸಿದ್ಧತೆ ನಡೆದಿದೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ. ಹೊಸ ಖಾತೆ ತೆರೆಯುವ ಕೋರಿಕೆ ಮತ್ತು ಖಾತೆಯಲ್ಲಿನ ಮೊತ್ತ ಪರಿಶೀಲನೆ ಬಗ್ಗೆ ಆಯ್ಕೆಗಳು ಇರಲಿವೆ.