ಸಮಾವೇಶ ಮೊಟಕುಗೊಳಿಸಿ ಬೆಂಗಳೂರಿಗೆ ಹೊರಟ ಸಿಎಂ

ಬಂಟ್ವಾಳ : ಮಂಗಳೂರಲ್ಲಿರೋ ಸಿಎಂ ಬಸವರಾಜ ಬೊಮ್ಮಾಯಿ ಅವರು ಫುಲ್ ಟೆನ್ಸನ್ ನಲ್ಲಿದ್ದಾರೆ. ಬಂಟ್ವಾಳದ ಬಂಟರ ಭವನದಲ್ಲಿ ನಡೆಯುತ್ತಿರುವ ಬಿಜೆಪಿ ಕಾರ್ಯಕರ್ತರ ಸಮಾವೇಶದ ವೇದಿಕೆಗೆ ಆಗಮಿಸಿದ ಸಿಎಂ ವಾಪಾಸ್ ತೆರಳಿದರು. ಇನ್ನು ಸಮಾವೇಶದಿಂದ ಸಿಎಂ ಸಿದಾ ಏರ್ ಪೋರ್ಟ್ ಕಡೆಗೆ ಪ್ರಯಾಣ ಬೆಳೆಸಿ ನೇರವಾಗಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಇನ್ನು ಮಾಧ್ಯಮಗಳಿಗೂ ಪ್ರತಿಕ್ರಿಯೆ ನೀಡದೆ ಸಿಎಂ ಆತುರಾತುರವಾಗಿ ಮಂಗಳೂರು ಏರ್ ಪೋರ್ಟ್ ಗೆ ಹೊರಟ್ಟಿದ್ದಾರೆ. ಇನ್ನು 1.40ಕ್ಕೆ ಸಿಎಂ ಬೊಮ್ಮಾಯಿ ಬೆಂಗಳೂರಿಗೆ ತೆರಳಲು ವಿಮಾನ ಹತ್ತಿದ್ದಾರೆ.