ಮೌಲ್ಯಮಾಪಕರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ

ಮೌಲ್ಯಮಾಪಕರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ

ಬೆಂಗಳೂರು:ಮೊನ್ನೆ SSLC ಪರೀಕ್ಷೆ ಮುಗಿದಿದೆ. ಇನ್ನು ಈ ಪತ್ರಿಕೆಗಳ ಮೌಲ್ಯಮಾಪನ ಕೆಲಸ ಶುರು ಆಗಬೇಕು. ಅಷ್ಟರಲ್ಲಿಯೇ ರಾಜ್ಯ ಸರ್ಕಾರ ಮೌಲ್ಯಮಾಪಕರಿಗೆ ಸಿಹಿ ಸುದ್ದಿ ಕೊಟ್ಟಿದೆ. ಎಸ್.ಎಸ್.ಎಲ್‌.ಸಿ ಉತ್ತರ ಪತ್ರಿಕೆ ಮೌಲ್ಯಮಾಪನ ಮಾಡೋ ಶಿಕ್ಷಕರ ಭತ್ಯಯನ್ನ ಸರ್ಕಾರ ಹೆಚ್ಚಿಸಿದೆ. ಶೇಕಡ 5 ರಷ್ಟು ಭತ್ಯೆ ಹೆಚ್ಚಿಸೋ ಮೂಲಕ ಸರ್ಕಾರ ಮೌಲ್ಯಮಾಪಕರಿಗೆ ಗುಡ್ ನ್ಯೂಸ್ ಕೊಟ್ಟಿದೆ. ಪರಿಷ್ಕೃತ ದರದಲ್ಲಿ 6,924 ರೂ ಇದ್ದ ಜಂಟಿ ಅಧೀಕ್ಷಕರ ಸಂಭಾವನೆ ಈಗ 7,270 ರೂ ಏರಿಕೆ ಆಗಿದೆ. ಉಪ ಮುಖ್ಯ ಅಧೀಕ್ಷಕರ ಸಂಭಾವನೆ 5,204 ದಿಂದ 5,464 ರೂ ಹೆಚ್ಚಳವಾಗಿದೆ.