Breaking: ಬ್ರಿಟನ್ ಪ್ರಧಾನ ಮಂತ್ರಿಯಾಗಿ ರಿಷಿ ಸುನಕ್ ಆಯ್ಕೆ

ಲಂಡನ್: ಭಾರತದ ಅಳಿಯ ರಿಷಿ ಸುನಕ್ ಬ್ರಿಟನ್‌ನ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಇನ್ಮುಂದೆ ಬ್ರಿಟನ್‌ನಲ್ಲಿ ಭಾರತೀಯ ಸಂಜಾತ ರಿಷಿ ಅವರ ರಾಜ್ಯಭಾರ ನಡೆಯಲಿದೆ.
ರಿಷಿ ಸುನಕ್ ಅವರಿಗೆ ಬ್ರಿಟನ್ ಸಂಸದರು ಬೆಂಬಲ ನೀಡಿದ್ದಾರೆ. ಇನ್‌ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಅವರ ಅಳಿಯ ರಿಷಿ ಸುನಕ್ ಬ್ರಿಟನ್ ಪ್ರಧಾನಿ ಆಗಿದ್ದು ಭಾರತೀಯರಿಗೆ ಹೆಮ್ಮೆಯ ಸಂಗತಿಯಾಗಿದೆ.