ಎಲ್‌ಪಿಜಿ ಗ್ಯಾಸ್ ಮತ್ತಷ್ಟು ದುಬಾರಿ.!

ಎಲ್‌ಪಿಜಿ ಗ್ಯಾಸ್ ಮತ್ತಷ್ಟು ದುಬಾರಿ.!

ನವದೆಹಲಿ: ದಿನದಿಂದ ದಿನಕ್ಕೆ ದೈನಂದಿನ ಬಳಕೆ ವಸ್ತುಗಳು, ಪದಾರ್ಥಗಳ ಬೆಲೆ ಏರಿಕೆಯಾಗುತ್ತಲೇ ಇದೆ. ಈಗ ಜನ ಸಾಮಾನ್ಯರಿಗೆ ಮತ್ತೊಂದು ಶಾಕ್ ಎದುರಾಗಿದೆ. ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ 50 ರೂಪಾಯಿ ಏರಿಕೆ ಮಾಡಲಾಗಿದೆ. ಅದರಂತೆ 14.2 ಕೆಜಿಯ ಎಲ್‌ಪಿಜಿ ಸಿಲಿಂಡರ್ ಬೆಲೆ ದೆಹಲಿಯಲ್ಲಿ 949.50 ರೂ. ಆಗಿದೆ. ಇಂದಿನಿಂದಲೇ ಅನ್ವಯವಾಗುವಂತೆ (ಮಾರ್ಚ್ 22, 2022) ಈ ದರ ಏರಿಕೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ 952.50 ರೂಪಾಯಿಗೆ ಏರಿಕೆ ಆಗಿದೆ. ಆದರೆ 19 ಕೆಜಿ ವಾಣಿಜ್ಯ ಬಳಕೆಯ ಎಲ್.ಪಿ.ಜಿ. ಸಿಲಿಂಡರ್ ಬೆಲೆ ಬೆಂಗಳೂರಿನಲ್ಲಿ 8 ರೂಪಾಯಿ ಇಳಿಕೆ ಮಾಡಲಾಗಿದೆ. ಮಾರ್ಚ್ 1 ರಂದು 2,075 ರೂಪಾಯಿ ಇದ್ದ ಸಿಲಿಂಡರ್ ಬೆಲೆ 2,067 ರೂಪಾಯಿಗೆ ಇಳಿಕೆ ಆಗಿದೆ.