ನನ್ನ ರಾಜೀನಾಮೆ ಪ್ರಶ್ನೆಯೇ ಉದ್ಭವಿಸುವುದಿಲ್ಲ: ಸಚಿವ ಈಶ್ವರಪ್ಪ ಸ್ಪಷ್ಟನೆ

ನನ್ನ ರಾಜೀನಾಮೆ ಪ್ರಶ್ನೆಯೇ ಉದ್ಭವಿಸುವುದಿಲ್ಲ: ಸಚಿವ ಈಶ್ವರಪ್ಪ ಸ್ಪಷ್ಟನೆ

ಶಿವಮೊಗ್ಗ : ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವ ಪ್ರಶ್ನೆಯೇ ಉದ್ಭವವಾಗುವುದಿಲ್ಲ ಇದೇ ಮಾತನ್ನು ನಾನು ಈಗಾಗಲೇ ಸಿ.ಎಂ. ಬೊಮ್ಮಾಯಿ ಮತ್ತು ನಮ್ಮ ರಾಜ್ಯಾಧ್ಯಕ್ಷರಿಗೂ ತಿಳಿಸಿದ್ದೇನೆ ಎಂದರು. ಈ ಪ್ರಕರಣದ ಬಗ್ಗೆ ಸೂಕ್ತ ತನಿಖೆಯಾಗಬೇಕು. ಕಾನೂನು ಬಾಹಿರವಾಗಿ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ನಡೆದ ಘಟನೆ ಹಿನ್ನೆಲೆಯಲ್ಲಿ ನನ್ನ ರಾಜೀನಾಮೆಯನ್ನು ಕೇಳುತ್ತಿದ್ದಾರೆ. ಇನ್ನು ಆತ್ಮಹತ್ಯೆ ಮಾಡಿಕೊಂಡಿರುವವನು ಡೆತ್ ನೋಟ್ ಬರೆದೆಯಿಲ್ಲ. ಡೆತ್ ನೋಟ್ ಬರೆಯದೇ, ಸುಳ್ಳು ಸುದ್ಧಿ ಹಬ್ಬಿಸಿದ್ದಾರೆ. ಇಲಾಖೆಯಲ್ಲಿ ವರ್ಕ್ ಆರ್ಡರ್ ನೀಡಲು ಟೆಕ್ನಿಕಲ್ ಆಗಿ, ನೀತಿ, ನಿಯಮ ಇರುತ್ತದೆ. ಇಷ್ಟು ವರ್ಷ ಆಡಳಿತ ನಡೆಸಿ ಅಧಿಕಾರ ನಡೆಸಿದ್ದಿರಲ್ಲಾ. ವರ್ಕ್ ಆರ್ಡರ್ ನೀಡದೇ ಬಿಲ್ ಪೇಮೆಂಟ್ ಮಾಡಿದ್ದಿರಾ....? ನನಗೆ ಎಲ್ಲೆಡೆಯಿಂದ ಫೋನ್ ಬರ್ತಿದೆ. ಯಾವುದೇ ರಾಜೀನಾಮೆ ಕೊಡಬೇಡಿ ಎಂದು ಹೇಳುತ್ತಿದ್ದಾರೆ ಎಂದರು. ಗಣಪತಿ ವಿಚಾರದಲ್ಲಿ, ಗಣಪತಿ ಡೆತ್ ನೋಟ್ ಬರೆದಿದ್ದರು. ಗಣಪತಿ ಬಾಡಿ ಬಳಿಯೇ, ಡೆತ್ ನೋಟ್ ಇತ್ತು. ನಾನು ವಾಟ್ಸಪ್ ನಲ್ಲಿ ಟೈಪ್ ಮಾಡುತ್ತೇನೆ ಇಂತಹವರ ಸಾವಿಗೆ ಇವರೇ ಕಾರಣ ಎಂದು ಹೇಳಿದರೆ, ನಂಬುತ್ತಾರಾ.? ಇದುವರೆಗೂ ನಾನು ಸಂತೋಷ್ ಮುಖವನ್ನೇ ನೋಡಿಲ್ಲ. ಆದರೆ, ನೂರಾರು ಸಲ ನಮ್ಮನೆಗೆ ಬಂದಿದ್ದರು ಎಂದು ಹೇಳಿದ್ದಾರಂತೆ. ಹಲವಾರು ಬಾರಿ ದೆಹಲಿಗೆ ಹೋಗಿ ಬಂದಿದ್ದಾರೆ. ಇವರಿಗೆ ಫ್ಲೈಟ್ ಟಿಕೆಟ್ ಮಾಡಿಸಿಕೊಟ್ಟವರು ಯಾರು...? ನಾನು ಬಡತನದಲ್ಲಿದ್ದೇನೆ ಎಂದು ಹೇಳಿದ್ದರು. ಇಷ್ಟಕ್ಕೆ ನಾನು ಸುಮ್ಮನಾಗುವುದಿಲ್ಲ ಖಾಸಗಿ ಚಾನಲ್ ಮತ್ತು ಸಂತೋಷ್ ಪಾಟೀಲ್ ಮೇಲೆ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ ಎಂದರು. ಲಕ್ಷ್ಮಿ ಹೆಬ್ಬಾಳ್ಕರ್ ಗೂ ತಲೆ ಕೆಟ್ಟಿದ್ದರೆ, ನಾನೇನು ಮಾಡಲಿ. ಸುಖಾ ಸುಮ್ಮನೆ ಆರೋಪ ಮಾಡಬಾರದು. ಹೆಣ್ಣುಮಕ್ಕಳ ಮೇಲೆ ನನಗೆ ಬಹಳ ಗೌರವವಿದೆ. ಲಕ್ಷ್ಮಿ ಹೆಬ್ಬಾಳ್ಕರ್ ಮೇಲೂ ಗೌರವವಿದೆ. ಆದರೆ ಅವರು ನನ್ನ ಮೇಲೆ ಆರೋಪ ಮಾಡಿದ್ದು ಸರಿಯಲ್ಲ ಎಂದರು. ಇನ್ನು ಮುಸಲ್ಮಾನಿಗೂ ನಾವು ಗೌರವ ನೀಡುತ್ತೇವೆ ಆದರೆ, ಗೂಂಡಾ ಮುಸಲ್ಮಾನರಿಗೆ ಈಗಲೂ ಎಚ್ಚರಿಕೆ ನೀಡುತ್ತೇವೆ ಎಂದರು.