ದೇಶದದಲ್ಲಿ ಇಂದಿನಿಂದ 5ಜಿ ಸೇವೆ : ಮೋದಿ ಚಾಲನೆ

ದೇಶದ ಟೆಲಿಕಾಂ ವ್ಯವಸ್ಥೆಯಲ್ಲಿ ಇಂದಿನಿಂದ ಹೊಸ ಶಖೆ ಆರಂಭವಾಗಲಿದೆ. ತಂತ್ರಜ್ಞಾನದಲ್ಲಿ 5ಜಿ ಸೇವೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಭಾರತದಲ್ಲಿ 5G ತಂತ್ರಜ್ಞಾನದ ಸಾಮರ್ಥ್ಯವನ್ನು ತೋರಿಸಲು ದೇಶದ ಮೂರು ಪ್ರಮುಖ ಟೆಲಿಕಾಂ ಆಪರೇಟರ್ ಗಳು ಪ್ರಾತ್ಯಕ್ಷಿಕೆ ನೀಡಲಿವೆ.
5ಜಿ.. ಇಂಟರ್ ನೆಟ್ ನ ಶರವೇಗದ ಸರದಾರಅತೀ ವೇಗವಾಗಿ ಸಿನಿಮಾಗಳನ್ನು ಡೌನ್ಲೋಡ್ ಸಾಮರ್ಥ್ಯ, ಸಂವಹನಕ್ಕೆ ಅಲ್ಟ್ರಾ ಹೈ ಡೆಫಿನಿಶನ್ ಕನೆಕ್ಷನ್, ಏಕಕಾಲದಲ್ಲಿ ಹತ್ತಾರು ಮಷೀನ್ ಸಂಪರ್ಕ. ಹೈಸ್ಪೀಡ್ ಆಧುನಿಕ ಜಗತ್ತು ಮತ್ತಷ್ಟು ಮಿಂಚಲಿದೆ.
ಹೌದು ಇಂದಿನಿಂದ 5ಜಿ ಕ್ರಾಂತಿಗೆ ಭಾರತ ಮುನ್ನುಡಿ ಬರೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಬೆಳಗ್ಗೆ 10 ಗಂಟೆಗೆ 5ಜಿ ದೂರಸಂಪರ್ಕ ಸೇವೆಗಳಿಗೆ ಚಾಲನೆ ನೀಡಲಿದ್ದಾರೆ. 6ನೇ ಇಂಡಿಯನ್ ಮೊಬೈಲ್ ಕಾಂಗ್ರೆಸ್ ನಲ್ಲಿ ದೇಶದ ಆಯ್ದ ನಗರಗಳಲ್ಲಿ ಈ ಸೇವೆಗೆ ಚಾಲನೆ ನೀಡಲಿದ್ದು, ಎರಡು ವರ್ಷಗಳಲ್ಲಿ ದೇಶಾದ್ಯಂತ ಹೈಸ್ಪೀಡ್ ಸೇವೆ ಹಂತ ಹಂತವಾಗಿ ಲಭ್ಯವಾಗಲಿದೆ.
ಮೂರು ಕಂಪೆನಿಗಳಿಂದ 5ಜಿ ಸೇವೆ..
ಮುಕೇಶ್ ಅಂಬಾನಿ ಮಾಲೀಕತ್ವದ ಜಿಯೊ, ಸುನೀಲ್ ಭಾರ್ತಿ ಮಿತ್ತಲ್ ಮಾಲೀಕತ್ವದ ಭಾರ್ತಿ ಏರ್ ಟೆಲ್ ಮತ್ತು ವೊಡಾಫೋನ್ ಐಡಿಯಾ ಕಂಪನಿಗಳು 5ಜಿ ಸೇವೆಗಳನ್ನು ಆರಂಭಿಸಲು ಅಗತ್ಯವಿರುವ ತರಂಗಾಂತರಗಳನ್ನು ಹರಾಜಿನ ಮೂಲಕ ಖರೀದಿಸಿವೆ.
ಖಾಸಗಿ ನೆಟ್ವರ್ಕ್ ಸ್ಥಾಪಿಸಲು ಅಗತ್ಯವಿರುವ 5ಜಿ ತರಂಗಾಂತರಗಳನ್ನು ಅದಾನಿ ಸಮೂಹ ಖರೀದಿ ಮಾಡಿದೆ. ಭಾರತದಲ್ಲಿ 5G ತಂತ್ರಜ್ಞಾನದ ಸಾಮರ್ಥ್ಯವನ್ನು ತೋರಿಸಲು ದೇಶದ ಮೂರು ಪ್ರಮುಖ ಟೆಲಿಕಾಂ ಆಪರೇಟರ್ ಗಳು ಈ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಿವೆ.