ಕೇರಳದಲ್ಲಿ ಮತ್ತೆ ಮಳೆ; 5 ಜಿಲ್ಲೆ ರೆಡ್ ಅಲರ್ಟ್ !

ಕೇರಳ: ದೇವರ ನಾಡು ಕೇರಳದಲ್ಲಿ ಮತ್ತೆ ಭಾರೀ ಮಳೆ ಸುರಿಯುತ್ತಿದೆ. ಇಲ್ಲಿ ಮಳೆ ಸುರಿದರೆ ಮುಗಿದೆ ಹೋಯಿತು. ನದಿಗಳು ತುಂಬಿ ಹರಿಯುತ್ತವೆ. ಜನ ಜೀವನ ಅಸ್ತವ್ಯಸ್ತಗೊಳ್ಳುತ್ತದೆ.
ನಿಜ, ಕೇರಳದಲ್ಲಿ ಮಳೆ ಬಂದ್ರೆ ಎಲ್ಲವೂ ಅಲ್ಲೋಲ ಕಲ್ಲೋಲ ಆಗುತ್ತದೆ. ಅದಕ್ಕೇನೆ ಈಗ ಸುರಿಯುತ್ತಿರೋ ಮಳೆಯಿಂದಾಗಿಯೇ ಇಲ್ಲಿಯ ಐದು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
ಇಡುಕ್ಕಿ,ಎರ್ನಾಕುಲಂ,ಮಲಪ್ಪುರಂ,ಕೋಜಿಕೋಡ್,ವಯನಾಡಿನಲ್ಲಿ ಈಗ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದೆ.