ಸರ್ವರ್ ಸಮಸ್ಯೆ ಕ್ಲಿಯರ್ : ರಾಜ್ಯಾದ್ಯಂತ ಉಪನೋಂದಣಿ ಕಚೇರಿಯ ಆಸ್ತಿ ನೋಂದಣಿ ಪುನರಾರಂಭ

ಬೆಂಗಳೂರು: ರಾಜ್ಯಾದ್ಯಂತ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಆಸ್ತಿ ನೋಂದಣಿಗೆ ಸರ್ವರ್ ಸಮಸ್ಯೆ ಉಂಟಾಗಿ ತೊಂದರೆಯಾಗಿತ್ತು. ಇದೀಗ ಸರ್ವರ್ ಸಮಸ್ಯೆ ಪರಿಹರಿಸಲಾಗಿದ್ದು, ಆಸ್ತಿ ನೋಂದಣಿಯನ್ನು ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಪುನರಾರಂಭಿಸಲಾಗಿದೆ ಎಂಬುದಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ರಿಜಿಸ್ಟ್ರೇಷನ್ ಕಾಯ್ದೆ 1908ರ ನಿಯಮ 22(B) ತಿದ್ದುಪಡಿ ವಿರೋಧಿಸಿ ಐದಾರು ನೋಂದಣಿಯನ್ನು ಕೆಲಕಾಲ ಉಪನೋಂದಣಾಧಿಕಾರಿಗಳು ಕಂಡುಬಂದಿರುತ್ತದೆ. ಆದರೆ ನಂತರ ಉಪನೋಂದಣಾಧಿಕಾರಿಗಳೊಂದಿಗೆ ಚರ್ಚಿಸಿ ನೋಂದಣಿ ಕಾರ್ಯ ಎಂದಿನಂತೆಯೇ ಮುಂದುವರೆಸಲು ಕ್ರಮವಹಿಸಲಾಗಿದೆ.
ಪುಸ್ತುತ ಯಾವುದೇ ಸಮಸ್ಯೆ ಇರುವುದಿಲ್ಲ, ಯಾರೇ ನೋಂದಣಿ ಮಾಡಿಸಿಕೊಳ್ಳಬೇಕಾದವರು ನೋಂದಣಿ ಮಾಡಿಸಬಹುದಾಗಿರುತ್ತದೆ ಎಂದು ಸ್ಪಷ್ಟಪಡಿಸಿದೆ ಎಂಬುದಾಗಿ ತಿಳಿಸಿದ್ದಾರೆ.