19ನೇ ಏಷ್ಯನ್ ಗೇಮ್ಸ್‌ಗೆ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಚಾಲನೆ

19ನೇ ಏಷ್ಯನ್ ಗೇಮ್ಸ್‌ಗೆ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಚಾಲನೆ

19ನೇ ಏಷ್ಯನ್ ಕ್ರೀಡಾಕೂಟವನ್ನು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಹ್ಯಾಂಗ್‌ಝೌನಲ್ಲಿ ಅಧಿಕೃತವಾಗಿ ಉದ್ಘಾಟನೆ ಮಾಡಿದ್ದಾರೆ. 

19ನೇ ಏಷ್ಯನ್ ಗೇಮ್ಸ್ 2022ರಲ್ಲಿ ನಡೆಯಬೇಕಿತ್ತು. ಕೊರೊನಾ ಸಾಂಕ್ರಾಮಿಕ ಆತಂಕದ ಹಿನ್ನೆಲೆಯಲ್ಲಿ ಏಷ್ಯನ್ ಕ್ರೀಡಾಕೂಟವನ್ನು ಒಂದು ವರ್ಷಕ್ಕೆ ಮುಂದೂಡಲಾಯಿತು. ಈ ಕ್ರೀಡಾಕೂಟ ಅಧಿಕೃತವಾಗಿ ಚಾಲನೆಗೊಂಡಿದ್ದರೂ ಕೆಲ ಸ್ಪರ್ಧೆಗಳು ಸೆಪ್ಟೆಂಬರ್ 19ರಿಂದಲೇ ಆರಂಭವಾಗಿದೆ. ಉದ್ಘಾಟನೆಯಾಗಿ 15 ದಿನಗಳ ಕಾಲ ನಡೆಯಲಿರುವ ಈ ಸ್ಪರ್ಧೆ ಅಕ್ಟೋಬರ್ 8 ಭಾನುವಾರದಂದು ಸಮಾರೋಪಗೊಳ್ಳಲಿದೆ. 

5 ವರ್ಷಗಳ ಹಿಂದೆ ನಡೆದಿದ್ದ ಈ ಹಿಂದಿನ ಏಷ್ಯನ್ ಗೇಮ್ಸ್ ಆವೃತ್ತಿಯಲ್ಲಿ ಭಾರತ ಅದ್ಭುತ ಸಾಧನೆಯನ್ನು ಮಾಡಿ ಗಮನಸೆಳೆದಿತ್ತು. 16 ಚಿನ್ನದ ಪದಕಗಳನ್ನು ಭಾರತ ಗೆದ್ದಿದ್ದು ಒಟ್ಟಾರೆಯಾಗಿ 70 ಪದಕಗಳನ್ನು ತನ್ನದಾಗಿಸಿಕೊಂಡಿತ್ತು.