IPL 2024 | LSG vs MI: ಮುಂಬೈ ವಿರುದ್ಧ ಕೆಎಲ್ ರಾಹುಲ್ ನಾಯಕತ್ವದ ಲಕ್ನೋಗೆ ರೋಚಕ ಗೆಲುವು

IPL 2024 | LSG vs MI: ಮುಂಬೈ ವಿರುದ್ಧ ಕೆಎಲ್ ರಾಹುಲ್ ನಾಯಕತ್ವದ ಲಕ್ನೋಗೆ ರೋಚಕ ಗೆಲುವು

ಲಕ್ನೋ: ಉತ್ತಮ ಬೌಲಿಂಗ್ ಹಾಗೂ ಮಾರ್ಕಸ್ ಸ್ಟೊಯಿನಿಸ್ ಅರ್ಧಶತಕದ ಸಹಾಯದಿಂದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡವು ಮುಂಬೈ ಇಂಡಿಯನ್ಸ್‌ ವಿರುದ್ಧ 4 ವಿಕೆಟ್‌ಗಳಿಂದ ರೋಚಕ ಗೆಲುವು ಸಾಧಿಸಿದೆ. 

ಐಪಿಎಲ್ 2024ರ ಭಾಗವಾಗಿ ಲಕ್ನೋನ ಅಟಲ್ ಬಿಹಾರಿ ವಾಜಪೇಯಿ ಸ್ಟೇಡಿಯಂನಲ್ಲಿ ಇಂದು ನಡೆದ 48ನೇ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೋ ತಂಡದ ನಾಯಕ ಕೆ.ಎಲ್. ರಾಹುಲ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡವು ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 144 ರನ್‌ ಗಳಿಸಿತ್ತು. ತಂಡದ ಪರ ನೆಹಾಲ್ ವಧೇರಾ 46 ರನ್‌, ಟಿಮ್ ಡೇವಿಡ್ 35* ರನ್ ಹಾಗೂ ಇಶಾನ್ ಕಿಶನ್ 32 ರನ್‌ ಗಳಿಸಿದ್ದರು. 

ಬಳಿಕ ಬ್ಯಾಟಿಂಗ್ ಮಾಡಿದ ಲಕ್ನೋ ತಂಡವು 19.2 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 145 ರನ್‌ ಗಳಿಸಿ ಗೆಲುವು ಸಾಧಿಸಿದೆ. ತಂಡದ ಪರ ಮಾರ್ಕಸ್ ಸ್ಟೊಯಿನಿಸ್ 62 ರನ್‌, ನಾಯಕ ಕೆ.ಎಲ್. ರಾಹುಲ್ 28 ರನ್‌ ಹಾಗೂ ನಿಕೋಲಸ್ ಪೂರನ್ 14* ರನ್ ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.