ಚುನಾವಣೋತ್ತರ ಸಮೀಕ್ಷೆಯಲ್ಲಿ ಯೋಗಿನೇ ಮತ್ತೆ ಸಿಎಂ !

ಉತ್ತರ ಪ್ರದೇಶ: ಯೋಗಿ ಆದಿತ್ಯಾನಾಥ್ ಮತ್ತೆ ಸಿಎಂ ಆಗುವ ಸಾಧ್ಯತೆ ಹೆಚ್ಚಿದೆ. ಸದ್ಯದ ಎಕ್ಸಿಟ್ ಪೋಲ್ ಪ್ರಕಾರ ಯೋಗಿ ಆದಿತ್ಯನಾಥ್ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುತ್ತಾರೆ ಅನ್ನೋದೇ ಹೆಚ್ಚು ಕೇಳಿ ಬರುತ್ತದೆ. ಒಂದು ವೇಳೆ ಅದು ತಪ್ಪಿದ್ದೇ ಆದರೇ ಆ ಜಾಗಕ್ಕೆ ಸಮಾಜವಾದಿ ಪಕ್ಷ ಅಧಿಕಾರ ಬರಲಿದೆ. ಪಂಚರಾಜ್ಯದ ಚುನಾವಣೆಯಲ್ಲಿ ಉತ್ತರ ಪ್ರದೇಶದ ಅತಿ ಮಹತ್ವ ಪಡೆದಿದೆ. ಅತಿ ಹೆಚ್ಚು ವಿಧಾನ ಸಭಾ ಕ್ಷೇತ್ರ ಹೊಂದಿರೋ ರಾಜ್ಯವೂ ಇದಾಗಿದೆ. ಇಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಹವಾ ತುಂಬಾ ಸ್ಟ್ರಾಂಗ್ ಆಗಿಯೇ ಇದೆ. ಅದಕ್ಕೇನೆ ಇಲ್ಲಿ ಚುನಾವಣೆ ನಂತರವೂ ಫಲಿತಾಂಶ ಮತ್ತಷ್ಟು ಇನ್ನಷ್ಟು ಅನ್ನೋ ಮಟ್ಟಿಗೆ ಈಗಲೇ ಕುತೂಹಲ ಕೆರಳಿಸಿದೆ. ಇಂಡಿಯಾ ಟೈಮ್ಸ್ ಆಯಕ್ಸಿಸ್ ಮೈ ಇಂಡಿಯಾ ಪ್ರಕಾರ, ಉತ್ತರ ಪ್ರದೇಶದಲ್ಲಿ 288 ರಿಂದ 326 ಸ್ಥಾನ ಗೆಲ್ಲುತ್ತದೆ. ಟೈಮ್ಸ್ ನೌ ವೇಟೋ ಹೇಳುವಂತೆ 225 ಸ್ಥಾನ ಬಿಜೆಪಿಗೆ ಬರಲಿವೆ.ಜನ್ ಕೀ ಬಾತ್ ಪ್ರಕಾರ ಬಿಜೆಪಿ ಇಲ್ಲಿ 225 ರಿಂದ 260 ಸ್ಥಾನ ಪಡೆದು ಸ್ಪಷ್ಟ ಬಹುಮತ ಪಡೆಯುತ್ತದೆ.