ಮಾಲ್ಡೀವ್ಸ್‌ಗೆ ಮತ್ತೊಂದು ಶಾಕ್ - ದ್ವೀಪರಾಷ್ಟ್ರದಲ್ಲಿ ಚಿತ್ರೀಕರಣ ನಡೆಸದಿರಲು ಭಾರತೀಯ ಚಿತ್ರರಂಗ ನಿರ್ಧಾರ

ಮಾಲ್ಡೀವ್ಸ್‌ಗೆ ಮತ್ತೊಂದು ಶಾಕ್ - ದ್ವೀಪರಾಷ್ಟ್ರದಲ್ಲಿ ಚಿತ್ರೀಕರಣ ನಡೆಸದಿರಲು ಭಾರತೀಯ ಚಿತ್ರರಂಗ ನಿರ್ಧಾರ

ಮುಂಬೈ : ಮಾಲ್ಡೀವ್ಸ್‌ ಹಾಗೂ ಭಾರತದ ಬಿಕ್ಕಟ್ಟು ಮುಂದುವರೆದಿದೆ. ಭಾರತೀಯರ ಮಾಲ್ಡೀವ್ಸ್‌ ದ್ವೇಷ ಈಗ ಇನ್ನೊಂದು ಹಂತ ತಲುಪಿದೆ. ಸಿನಿಮಾ ಚಿತ್ರೀಕರಣಕ್ಕೆ ಪ್ರಸಿದ್ದವಾಗಿರುವ ಮಾಲ್ಡಿವ್ಸ್‌ನಲ್ಲಿ ಚಿತ್ರೀಕರಣ ನಡೆಸದಿರಲು ಭಾರತೀಯ ಸಿನಿಮಾರಂಗ ನಿರ್ಧರಿಸಿದೆ. 

ಆಲ್‌ ಇಂಡಿಯಾ ಸಿನಿ ವರ್ಕರ್ ಅಸೋಸಿಯೇಷನ್‌ ಈ ಕುರಿತು ಅಧಿಕೃತ ಹೇಳಿಕೆ ಹೊರಬಿಟ್ಟಿದೆ. ಎಐಸಿಡಬ್ಲ್ಯುಎ ಅಧ್ಯಕ್ಷ ಸುರೇಶ್‌ ಶ್ಯಾಮಲಾಲ್‌ ಮಾಲ್ಡೀವ್ಸ್‌ ಬದಲಾಗಿ ಭಾರತದ ದ್ವೀಪಗಳನ್ನು ಪ್ರಸಿದ್ದಗೊಳಿಸುವಂತೆ ಹೇಳಿದ್ದಾರೆ. 

ಭಾರತದ ವೈಮನಸ್ಯದ ನಡುವೆಯೂ ತನ್ನ ಉದ್ದಟತನವನ್ನು ಮುಂದುವರೆಸಿರುವ ಮಾಲ್ಡಿವ್ಸ್‌ ಮಾರ್ಚ್ 15 ಕ್ಕೂ ಮುನ್ನ ಭಾರತದ ಸೈನ್ಯವನ್ನು ಹಿಂತೆಗೆದುಕೊಳ್ಳುವಂತೆ ತಾಕೀತು ಮಾಡಿದೆ.