ಬೈ ಎಲೆಕ್ಷನ್ ಫಲಿತಾಂಶಕ್ಕೂ ಮುನ್ನ ಹಿರಿಯ ಸಚಿವರ ಜೊತೆ ಸಿಎಂ ಸಿದ್ದರಾಮಯ್ಯ ಮಹತ್ವದ ಸಭೆ

ಬೆಂಗಳೂರು : ರಾಜ್ಯದಲ್ಲಿ ನಡೆದ ಉಪಚುನಾವಣೆಯ ಫಲಿತಾಂಶಕ್ಕೂ ಮುನ್ನ ಸಿಎಂ ಸಿದ್ದರಾಮಯ್ಯ ತಮ್ಮ ಕಾವೇರಿ ನಿವಾಸದಲ್ಲಿ ಹಿರಿಯ ಸಚಿವರ ಜೊತೆ ಮಹತ್ವದ ಸಭೆ ನಡೆಸಿದರು.
ಉಪಚುನಾವಣೆ ಫಲಿತಾಂಶಕ್ಕೆ ಇನ್ನೂ ನಾಲ್ಕು ದಿನಗಳು ಮಾತ್ರ ಬಾಕಿ ಇದೆ ಈ ನಡುವೆ ಇಂದು ದಿಢೀರಾಗಿ ಹಿರಿಯ ಸಚಿವರನ್ನ ತಮ್ಮ ನಿವಾಸಕ್ಕೆ ಕರೆಸಿಕೊಂಡು ಚರ್ಚೆ ನಡೆಸಿರೋದು ಸಾಕಷ್ಟು ಕುತೂಹಲ ಮೂಡಿಸಿದೆ. ಡಿಸಿಎಂ ಡಿಕೆಶಿ, ದಿನೇಶ್ ಗುಂಡೂರಾವ್, ಕೆಹೆಚ್ ಮುನಿಯಪ್ಪ, ಪರಮೇಶ್ವರ್, ಪ್ರಿಯಾಂಕ್ ಖರ್ಗೆ ಸೇರಿದಂತೆ ಮತ್ತಿತರ ಹಿರಿಯ ಸಚಿವರು ಸಿಎಂ ನೇತೃತ್ವದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಭಾಗಿಯಾಗಿದ್ದಾರೆ.
ಇಂದಿನ ಸಭೆಯಲ್ಲಿ ಪ್ರಸಕ್ತ ರಾಜಕೀಯ ವಿದ್ಯಮಾಗಳ ಕುರಿತು ಹಿರಿಯ ಸಚಿವರೊಂದಿಗೆ ಸಿಎಂ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ ಅದ್ರಲ್ಲಿ ಪ್ರಮುಖವಾಗಿ ವಕ್ಫ್ ಬೋರ್ಡ್ ಮತ್ತು ರೈತರ ನಡುವಿನ ಸಮರ, ಕೋವಿಡ್ ಹಗರಣ ಕುರಿತು SIT ಮುಖ್ಯಸ್ಥರ ನೇಮಕ
ಶಾಸಕರ ಖರೀದಿ ಆರೋಪ, ಬೆಳಗಾವಿ ಅಧಿವೇಶದಲ್ಲಿ ವಿಪಕ್ಷಗಳ ಹೋರಾಟಕ್ಕೆ ಪ್ರತಿತಂತ್ರ ರೂಪಿಸುವ ನಿಟ್ಟಿನಲ್ಲಿ ಸಭೆ ಹಾಗೂ 40% ಆರೋಪ ತನಿಖೆಯ ವರದಿ ಬಗ್ಗೆ ಸಭೆಯಲ್ಲಿ ಚರ್ಚಿಸಲಿದ್ದಾರೆ ಎನ್ನಲಾಗಿದೆ.ಆದ್ರೂ ಹೀಗೆ ದಿಢೀರನೆ ಹಿರಿಯ ಸಚಿವರನ್ನ ಕರೆಸಿಕೊಂಡು ಸಿಎಂ ಸಿದ್ದರಾಮಯ್ಯ ಸಭೆ ನಡೆಸುತ್ತಿರೋದು ಸಾಕಷ್ಟು ಕೂತಹಲ ಮೂಡಿಸಿದೆ.