ಮಹಿಳಾ ದಿನ'ಕ್ಕೆ ವಿಶೇಷ ಗೌರವ ಸಲ್ಲಿಸಿದ ಗೂಗಲ್

ಮಹಿಳಾ ದಿನ'ಕ್ಕೆ ವಿಶೇಷ ಗೌರವ ಸಲ್ಲಿಸಿದ ಗೂಗಲ್

ನವದೆಹಲಿ: ಸರ್ಚ್​ ಎಂಜಿನ್ ದೈತ್ಯ ಸಂಸ್ಥೆ ಗೂಗಲ್ ಅಂತರರಾಷ್ಟ್ರೀಯ ಮಹಿಳಾ ದಿನದ ಪ್ರಯುಕ್ತ ವಿಶೇಷ ಡೂಡಲ್ ಹೊರತಂದಿದೆ. ತನಗಿರುವ ಹಲವಾರು ಸಮಸ್ಯೆಗಳನ್ನು ಮೆಟ್ಟಿ ನಿಂತು ಮಹಿಳೆ ಬಹುತೇಕ ರಂಗದಲ್ಲಿ ತನ್ನನ್ನು ತಾನು ಗುರುತಿಸಿಕೊಂಡಿದ್ದಾಳೆ. ಗೃಹಿಣಿಯರಿಂದ ವಿಜ್ಞಾನಿಗಳವರೆಗೆ ಸಮಾಜದಲ್ಲಿ ಮಹಿಳೆಯರು ನಿರ್ವಹಿಸುವ ವಿವಿಧ ಪಾತ್ರಗಳನ್ನು ಗೂಗಲ್ ಡೂಡಲ್ ಆನಿಮೇಟೆಡ್ ವಿಡಿಯೋ ವಿವರಿಸುತ್ತದೆ. ತಾಯಿಯೊಬ್ಬಳು ಲ್ಯಾಪ್​ಟಾಪ್​ನಲ್ಲಿ ಕೆಲಸ ಮಾಡುತ್ತಲೇ ಮಗುವನ್ನು ಗಮನಿಸುವ ದೃಶ್ಯದೊಂದಿಗೆ ವಿಡಿಯೋ ಆರಂಭವಾಗುತ್ತದೆ. ಒಬ್ಬ ಮಹಿಳೆ ಗಿಡಗಳಿಗೆ ನೀರು ಹಾಕುತ್ತಿದ್ದರೆ, ಮತ್ತೋರ್ವ ಮಹಿಳೆ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡುತ್ತಿರುತ್ತಾರೆ. ಹೀಗೇ ಇನ್ನೂ ಎಷ್ಟೋ ಮಹಿಳೆಯರು ಏನೇನೋ ಕೆಲಸಗಳನ್ನು ಮಾಡುತ್ತಲೇ ಇರುತ್ತಾರೆ. ಡೂಡಲ್ ಕಲಾ ನಿರ್ದೇಶಕ ತೊಕಾ ಮಯರ್​ ಅವರು ಇಂದಿನ ಡೂಡಲ್​ಗಾಗಿ ಚಿತ್ರಗಳನ್ನು ಬರೆದಿದ್ದಾರೆ.