ಶಾಸ್ತ್ರೀಯ ಗಾಯಕಿ ಪದ್ಮವಿಭೂಷಣ ಡಾ. ಪ್ರಭಾ ಅತ್ರೆ ನಿಧನ

ಶಾಸ್ತ್ರೀಯ ಗಾಯಕಿ ಪದ್ಮವಿಭೂಷಣ ಡಾ. ಪ್ರಭಾ ಅತ್ರೆ ನಿಧನ

ನವದೆಹಲಿ: ಖ್ಯಾತ ಶಾಸ್ತ್ರೀಯ ಗಾಯಕಿ ಮತ್ತು ಪದ್ಮ ವಿಭೂಷಣ ಪುರಸ್ಕೃತ ಡಾ.ಪ್ರಭಾ ಅತ್ರೆ ಅವರು ಜನವರಿ 13ರಂದು ಪುಣೆಯ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. 

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಕಿರಾಣಾ ಘರಾನಾದ ಜ್ಯೋತಿಯನ್ನು ಹೊತ್ತ ಅತ್ರೆ ಅವರಿಗೆ ಭಾರತ ಸರ್ಕಾರವು ಎಲ್ಲ ಮೂರು ಪದ್ಮ ಪ್ರಶಸ್ತಿಗಳನ್ನು ನೀಡಿ ಗೌರವಿಸಿತ್ತು. 

ಅತ್ರೆ ತನ್ನ ನಿವಾಸದಲ್ಲಿ ನಿದ್ರೆಯಲ್ಲಿದ್ದಾಗ ಹೃದಯ ಸ್ತಂಭನಕ್ಕೆ ಒಳಗಾದರು. ಅವರನ್ನು ದೀನನಾಥ್ ಮಂಗೇಶ್ಕರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ಬೆಳಿಗ್ಗೆ 5: 30ಕ್ಕೆ ನಿಧನರಾದರು ಎಂದು ಘೋಷಿಸಲಾಯಿತು ಎಂದು ಮೂಲಗಳು ತಿಳಿಸಿವೆ. ಅತ್ರೆ ಅವರ ಕೆಲವು ಆಪ್ತ ಕುಟುಂಬ ಸದಸ್ಯರು ವಿದೇಶದಲ್ಲಿ ವಾಸಿಸುತ್ತಿರುವುದರಿಂದ, ಅವರು ಬಂದ ನಂತರ ಅವರ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಮೂಲಗಳು ತಿಳಿಸಿವೆ.