ಕುಂದಗೋಳ : ಅಕ್ಟೋಬರ್ 1 ರಿಂದ ಹಿಂಗಾರು ಬಿತ್ತನೆ ಬೀಜ ಪೂರೈಕೆ ಆರಂಭ

ಕುಂದಗೋಳ : ಪ್ರಸಕ್ತ ಸಾಲಿನ ಹಿಂಗಾರು ಹಂಗಾಮು ಬಿತ್ತನೆ ಬೀಜ ವಿತರಣೆಯನ್ನು ಅ.1 ರಿಂದ ಕುಂದಗೋಳ ರೈತ ಸಂಪರ್ಕ ಕೇಂದ್ರ ಹಾಗೂ ಸಂಶಿ ರೈತ ಸಂಪರ್ಕ ಕೇಂದ್ರದಲ್ಲಿ ಆರಂಭಿಸಲಾಗುವುದು ಎಂದು ಸಹಾಯಕ ಕೃಷಿ ನಿರ್ದೇಶಕರು ಮಾಹಿತಿ ನೀಡಿದ್ದಾರೆ.
ಹೌದು ! ಈಗಾಗಲೇ 5 ಸಾವಿರ ಕ್ವಿಂಟಾಲ್ ಕಡಲೆ, 50 ಕ್ವಿಂಟಾಲ್ ಜೋಳ, 105 ಕ್ವಿಂಟಾಲ್ ಗೋಧಿ, 60 ಕ್ವಿಂಟಾಲ್ ಕುಸುಬಿಯನ್ನು ದಾಸ್ತಾನು ಮಾಡಲಾಗಿದ್ದು ರೈತರು ಇದರ ಸದುಪಯೋಗವನ್ನು ಪಡೆದು ಕೊಳ್ಳಬೇಕೆಂದು ಕೃಷಿ ಸಹಾಯಕ ನಿರ್ದೇಶಕಿ ಭಾರತಿ ಮೆಣಸಿನಕಾಯಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.