ಬ್ರೇಕಿಂಗ್: ರಾಜ್ಯದಲ್ಲಿ ಇಂದು ಮಂದಿಗೆ 7,040 ಪಾಸಿಟಿವ್, 124 ಸಾವು

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ರೌದ್ರಾವತಾರಕ್ಕೆ ಕಡಿವಾಣ ಬೀಳುತ್ತಿಲ್ಲ. ಒಂದೆಡೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಅದರ ಜತೆಗೆ ಗುಣಮುಖರಾಗುವವರ ಸಂಖ್ಯೆಯೂ ಹೆಚ್ಚುತ್ತಿದೆ. ಇಂದು ಹೊಸದಾಗಿ 7,040 ಮಂದಿಗೆ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಈ ಮೂಲಕ ರಾಜ್ಯದಲ್ಲಿ 83,191 ಸಕ್ರಿಯ ಪ್ರಕರಣಗಳಿದೆ ಎಂದು ತಿಳಿದು ಬಂದಿದೆ. ಇಂದು 6,683 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಕಿಲ್ಲರ್ ಕೊರೊನಾ ಸೋಂಕಿಗೆ ಇಂದು 124 ಜನರು ಬಲಿಯಾಗಿದ್ದಾರೆ.
ಬೆಂಗಳೂರಿನಲ್ಲಿ ಇಂದು 2131 ಪ್ರಕರಣ ದಾಖಲಾಗಿದ್ದು, ಇಂದು ಬೆಂಗಳೂರಿನಲ್ಲಿ 49 ಮಂದಿ ಬಲಿಯಾಗಿದ್ದಾರೆ. ಸದ್ಯ ಬೆಂಗಳೂರಿನಲ್ಲಿ 34,583 ಸಕ್ರಿಯ ಪ್ರಕರಣಗಳಿದೆ.