Exclusive : ಓಪನ್ ಬಸ್ ಮೆರವಣಿಗೆ ಇಲ್ಲ - 4 ಗಂಟೆಗೆ ವಿಧಾನಸೌಧ ಗ್ರಾಂಡ್ ಸ್ಟೆಪ್ ಮೇಲೆ RCB ತಂಡಕ್ಕೆ ಸಿಎಂರಿಂದ ಗೌರವ

Exclusive : ಓಪನ್ ಬಸ್ ಮೆರವಣಿಗೆ ಇಲ್ಲ - 4 ಗಂಟೆಗೆ ವಿಧಾನಸೌಧ ಗ್ರಾಂಡ್ ಸ್ಟೆಪ್ ಮೇಲೆ RCB ತಂಡಕ್ಕೆ ಸಿಎಂರಿಂದ ಗೌರವ

ಬೆಂಗಳೂರು : 18ನೇ ಪ್ರಯತ್ನದಲ್ಲಿ ಆರ್'ಸಿಬಿ ತಂಡ ಟ್ರೋಫಿಗೆ ಮುತ್ತಿಟ್ಟಿದೆ. ಈ ಐತಿಹಾಸಿಕ ಗೆಲುವು ಬೆನ್ನಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿಜಯೋತ್ಸವದ ಮೆರವಣಿಗೆಯನ್ನು ಘೋಷಣೆ ಮಾಡಿತ್ತು. ಆದರೆ ಸಂಜೆ ಓಪನ್ ಬಸ್ ಮೆರವಣಿಗೆ ಇಲ್ಲವೆಂಬ ಮಾಹಿತಿ ಲಭ್ಯವಾಗಿದೆ. 

ಹೌದು.. ಸಂಜೆ 4 ಗಂಟೆಗೆ ವಿಧಾನಸೌಧ ಗ್ರಾಂಡ್ ಸ್ಟೆಪ್ ಮೇಲೆ ಆರ್‌ಸಿಬಿ ತಂಡಕ್ಕೆ ಸಿಎಂ ಸಿದ್ದರಾಮಯ್ಯ ಗೌರವ ಸಲ್ಲಿಸಲಿದ್ದಾರೆ. ನಂತರ ಬಾಳೆಕುಂದ್ರಿ ಸರ್ಕಲ್‌ನಿಂದ ನೇರವಾಗಿ ಚಿನ್ನಸ್ವಾಮಿ ಸ್ಟೇಡಿಯಂಗೆ ತಂಡ ತೆರಳಲಿದೆ. 

ಆರ್‌ಸಿಬಿ ತಂಡ ಕ್ಲೋಸ್ ಬಸ್‌ನಲ್ಲೆ ಚಿನ್ನಸ್ವಾಮಿಗೆ ತೆರಳಲಿದೆ. ಸದ್ಯ ಈ ಕುರಿತು ನಗರ ಪೊಲೀಸ್ರು ಸಭೆ ನಡೆಸುತ್ತಿದ್ದಾರೆ.