ವಾರಣಾಸಿಯಿಂದಲೇ ಮೋದಿ ಸ್ಪರ್ಧೆ - ಗಾಂಧಿನಗರದಿಂದ ಅಮಿತ್‌ ಶಾ, ಲಕ್ನೋದಿಂದ ರಾಜ್‌ನಾಥ್ ಸಿಂಗ್‌ ಪೈಪೋಟಿ

ವಾರಣಾಸಿಯಿಂದಲೇ ಮೋದಿ ಸ್ಪರ್ಧೆ - ಗಾಂಧಿನಗರದಿಂದ ಅಮಿತ್‌ ಶಾ, ಲಕ್ನೋದಿಂದ ರಾಜ್‌ನಾಥ್ ಸಿಂಗ್‌ ಪೈಪೋಟಿ

ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಗೆ ಬಿಜೆಪಿ 195 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಇಂದು ಪ್ರಕಟಿಸಿದೆ. ಈ ಪಟ್ಟಿಯಲ್ಲಿ 34 ಕೇಂದ್ರ ಸಚಿವರು ಸೇರ್ಪಡೆಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ವಾರಣಾಸಿಯಿಂದ ಮೂರನೇ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದರೆ, ಗಾಂಧಿನಗರದಿಂದ ಗೃಹ ಸಚಿವ ಅಮಿತ್ ಶಾ ಹಾಗೂ ಲಕ್ನೋದಿಂದ ರಾಜ್‌ನಾಥ್ ಸಿಂಗ್‌ ಸ್ಪರ್ಧೆ ಮಾಡುತ್ತಿದ್ದಾರೆ. ಪಟ್ಟಿಯಲ್ಲಿ ಉತ್ತರ ಪ್ರದೇಶದ 51 ಅಭ್ಯರ್ಥಿಗಳು ಇದ್ದಾರೆ. 

ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಅವರು, "ವಾರಣಾಸಿಯಿಂದ ಲೋಕಸಭೆ ಚುನಾವಣೆಗೆ ಪ್ರಧಾನಿ ಮೋದಿ, ಅರುಣಾಚಲ ಪಶ್ಚಿಮದಿಂದ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು, ಅಂಡಮಾನ್ ಮತ್ತು ನಿಕೋಬಾರ್‌ನಿಂದ ಬಿಜೆಪಿ ಸಂಸದ ಬಿಷ್ಣು ಪದಾ ರೇ, ಅರುಣಾಚಲ ಪೂರ್ವದಿಂದ ಸಂಸದ ತಪಿರ್ ಗಾವೋ ಸ್ಪರ್ಧಿಸಲಿದ್ದಾರೆ' ಎಂದು ತಿಳಿಸಿದರು.