ಫುಡ್ ವಿಲ್ಲಾ ಕಂಪೌಂಡ್ ತೆರವುಗೊಳಿಸಿದ ಮಹಾನಗರ ಪಾಲಿಕೆ

ಫುಡ್ ವಿಲ್ಲಾ ಕಂಪೌಂಡ್ ತೆರವುಗೊಳಿಸಿದ ಮಹಾನಗರ ಪಾಲಿಕೆ

ಹುಬ್ಬಳ್ಳಿ: ವಿದ್ಯಾನಗರದಲ್ಲಿ ಜನಮನ್ನಣೆ ಗಳಿಸಿದ್ದ ಫುಡ್ ವಿಲ್ಲಾ ಕಂಪೌಂಡ್‌ಅನ್ನು ಬೆಳ್ಳಂಬೆಳಿಗ್ಗೆ ಮಹಾನಗರ ಪಾಲಿಕೆ ನೇತೃತ್ವದಲ್ಲಿ ತೆರವುಗೊಳಿಸಲಾಗಿದೆ. ವಿದ್ಯಾನಗರದ ಪ್ರಮುಖ ಸ್ಥಳದಲ್ಲಿದ್ದ ಫುಡ್ ವಿಲ್ಲಾದ ಕಂಪೌಂಡ್ ಗೋಡೆಯೂ ಪುಟ್ ಪಾತ್‌ಅನ್ನು ಕಬಳಿಸಿತ್ತೆಂದು ಹೇಳಲಾಗಿದ್ದು, ಇದೇ ಕಾರಣಕ್ಕೆ ಕಾರ್ಯಾಚರಣೆ ಮಾಡಿದ ಮಹಾನಗರ ಪಾಲಿಕೆ ಗೋಡೆಯನ್ನ ತೆರವುಗೊಳಿಸಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ನಿಯೋಜನೆ ಮಾಡಿದ್ದರು. ಮಹಾನಗರ ಪಾಲಿಕೆಯ ಅಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು.