ಬಿಬಿಎಂಪಿ ಬಜೆಟ್‌ಗೆ ಸರ್ಕಾರ ಗ್ರೀನ್ ಸಿಗ್ನಲ್: 509 ಕೋಟಿ ಸೇರಿಸಿ ಅನುಮೋದನೆ

ಬೆಂಗಳೂರು: ಬಿಬಿಎಂಪಿ ಬಜೆಟ್‌ಗೆ ಸರ್ಕಾರ ಅನುಮೋದನೆ ನೀಡಿದೆ. 2025-26 ನೇ ಸಾಲಿನ ಬಿಬಿಎಂಪಿ ಬಜೆಟ್‌ಗೆ ಕಾಂಗ್ರೆಸ್ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಬಜೆಟ್ ಮಂಡನೆಗಿಂತ ಹೆಚ್ಚುವರಿಯಾಗಿ ಮತ್ತಷ್ಟು ಸೇರಿಸಿ ಅನುಮೋದನೆ ನೀಡಿದೆ.
ಬಜೆಟ್ ಮಂಡನೆ ವೇಳೆ 19,927 ಕೋಟಿ ಬಜೆಟ್ ಮಂಡನೆ ಮಾಡಿದ್ರು. ಆದ್ರೆ ಇದೀಗ ರಾಜ್ಯ ಸರ್ಕಾರದ ಅನುಮೋದನೆ ಮೇಲೆ ಹೆಚ್ಚುವರಿಯಾಗಿ 509 ಕೋಟಿ ಸೇರಿಸಿ 20,439.77 ಕೋಟಿಗೆ ಅನುಮೋದನೆ ನೀಡಿದ. ಬೆಂಗಳೂರು ಉಸ್ತುವಾರಿ ಸಚಿವರಿಗೆ 13.5 ಕೋಟಿ ತಮ್ಮ ವಿವೇಚನಾ ಅಡಿಯಲ್ಲಿ ಅನುದಾನ ನೀಡಲಾಗಿತ್ತು. ಆದರೆ ಈಗ ಹೆಚ್ಚುವರಿಯಾಗಿ 224 ಕೋಟಿ ಸೇರಿಸಿ ಅನುದಾನ ಮೀಸಲಿಡಲಾಗಿದೆ.
ಇನ್ನು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರಕ್ಕೆ ನೂರು ಕೋಟಿ ಅನುದಾನ ನೀಡಲಾಗಿತ್ತು. ಇದೀಗ ಕೇವಲ 40 ಕೋಟಿ ಅನುದಾನ ಮೀಸಲಿಡಲಾಗಿದೆ. ಈ ಬಾರಿಯ ರಾಜಧಾನಿ ಬಜೆಟ್ ಗಾತ್ರ ಎರಡು ರಾಜ್ಯಗಳ ಬಜೆಟ್‌ಗಿಂತ ಹೆಚ್ಚಾಗಿದೆ.