CET ಪರೀಕ್ಷೆ ಅರ್ಜಿ ಸಲ್ಲಿಕೆಗೆ ಎರಡು ದಿನ ಅವಧಿ ವಿಸ್ತರಣೆ!

CET ಪರೀಕ್ಷೆ ಅರ್ಜಿ ಸಲ್ಲಿಕೆಗೆ ಎರಡು ದಿನ ಅವಧಿ ವಿಸ್ತರಣೆ!

ಬೆಂಗಳೂರು : CET ಪರೀಕ್ಷೆಗೆ ಅರ್ಜಿ ಸಲ್ಲಿಸಲು ಮಾರ್ಚ್ 20 ರ ಮಧ್ಯರಾತ್ರಿ 12 ಗಂಟೆವರೆಗೂ ಅವಕಾಶ ನೀಡಲಾಗಿದೆ. ಹಾಗೂ ಶುಲ್ಕ ಪಾವತಿಸಲು ಮಾರ್ಚ್ 21ರ ಸಂಜೆ 5:30ರ ವರೆಗೂ ಕಾಲಾವಕಾಶ ನೀಡಲಾಗಿದೆ. 

ಹೌದು, ಇನ್ನು CET ಪರಿಕ್ಷೆಗಳಿಗೆ ಅರ್ಜಿ ಸಲ್ಲಿಸದ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಗುಡ್ ನ್ಯೂಸ್ ಕೊಟ್ಟಿದೆ. CET ಅರ್ಜಿ ಸಲ್ಲಿಸಲು ಗಡುವು ವಿಸ್ತರಣೆ ಮಾಡುವುದರ ಜೊತೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಬೆಂಗಳೂರಿನ ಕೇಂದ್ರಗಳಲ್ಲಿ ಮಾತ್ರ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. 

ಈಗಾಗಲೇ 3,75,399 ಅಭ್ಯರ್ಥಿಗಳು ಸಿಇಟಿಗೆ ನೋಂದಾಯಿಸಿಕೊಂಡಿದ್ದಾರೆ, ಹಾಗೂ 3,44,883 ಅಭ್ಯರ್ಥಿಗಳು ಶುಲ್ಕ ಪಾವತಿಸಿದ್ದಾರೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದ್ದು, ಕಳೆದ ವರ್ಷಕ್ಕೆ ಓಲೈಕೆ ಮಾಡಿದರೆ, ಈ ಬಾರಿ ಒಂದು ಲಕ್ಷ ಹೆಚ್ಚು ಮಂದಿ ಸಿಇಟಿ ನೋಂದಣಿ ಮಾಡಿಕೊಂಡಂತಾಗಿದೆ ಎಂದು ಮಾಹಿತಿ ನೀಡಿದರು.