ಇಂದು ಹುಬ್ಬಳ್ಳಿಗೆ ಜೆ.ಪಿ ನಡ್ಡಾ ಭೇಟಿ

ಹುಬ್ಬಳ್ಳಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಇಂದು ಇಂದು ಹುಬ್ಬಳ್ಳಿಗೆ ಭೇಟಿ ನೀಡಲಿದ್ದಾರೆ. ಅವರ ಹುಬ್ಬಳ್ಳಿಯ ಪ್ರಯಾಣದ ವಿವರ ಇಲ್ಲಿದೆ ನೋಡಿ.
ಜೆ.ಪಿ ನಡ್ಡಾ ಅವರು ಇಂದು ಮಧ್ಯಾಹ್ನ 2:25 ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಬಳಿಕ ಕಿತ್ತೂರು ಕರ್ನಾಟಕದ ಲೋಕಸಭಾ ಕ್ಷೇತ್ರಗಳ ಗೆಲುವಿಗೆ ರಣತಂತ್ರ ಮಾಡಲಿದ್ದಾರೆ. ಇನ್ನು ಬಿಜೆಪಿ ಪ್ರಮುಖರೊಂದಿಗೆ ಮಧ್ಯಾಹ್ನ ಮೂರರಿಂದ ನಾಲ್ಕು ಗಂಟೆವರೆಗೆ ಮೊದಲ ಸುತ್ತಿನ ಸಭೆ ನಡೆಯಲಿದೆ. ನಾಲ್ಕರಿಂದ ನಾಲ್ಕು ಮೂವತ್ತರವರೆಗೆ ಬಿಜೆಪಿ ಪ್ರಮುಖರ ಜೊತೆ ಚರ್ಚೆ ಆಗಲಿದೆ. ಸಂಜೆ 4:30ಕ್ಕೆ ಸಾಖರೆ ಶಾಲಾ ಮೈದಾನದಲ್ಲಿ ಬಿಜೆಪಿಯ ಬೃಹತ್ ಬಹಿರಂಗ ಸಮಾವೇಶ ನಡೆಯಲಿದೆ. ಪ್ರಹ್ಲಾದ್ ಜೋಶಿ ಸೇರಿದಂತೆ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡಲಿದ್ದಾರೆ.
ಜೆ.ಪಿ ನಡ್ಡಾ ಅವರು ಸಂಜೆ 5:30ಕ್ಕೆ ಡೆನಿಸನ್ಸ್ ಹೋಟೆಲ್‌ಗೆ ಆಗಮಿಸಲಿದ್ದು, 6:30ರಿಂದ ರಾತ್ರಿ10 ಗಂಟೆಯವರೆಗೆ ನಿರಂತರ ಮೀಟಿಂಗ್, ಚುನಾವಣಾ ಪ್ರಚಾರ ರಣತಂತ್ರ, ಗ್ರೌಂಡ್ ರಿಪೋರ್ಟ್ ಪಡೆಯಲಿದ್ದಾರೆ. ಡೆನಿಸನ್ಸ್ ಹೋಟೆಲ್‌ನಲ್ಲೇ ವಾಸ್ತವ್ಯ ಹೂಡಲಿದ್ದಾರೆ.