ರಾಜ್ಯದಲ್ಲಿ ಕೋವಿಡ್ 4 ನೇ ಅಲೆ ಬಂದಿಲ್ಲ;ಆದರೂ ಎಚ್ಚರವಾಗಿರಿ !

ರಾಜ್ಯದಲ್ಲಿ ಕೋವಿಡ್ 4 ನೇ ಅಲೆ ಬಂದಿಲ್ಲ;ಆದರೂ ಎಚ್ಚರವಾಗಿರಿ !

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ನಾಲ್ಕನೆ ಅಲೆ ಬಂದೇ ಇಲ್ಲ. ಜನ ಮಾಸ್ಕ್ ಧರಿಸಿಬೇಕಿದೆ. ಲಸಿಕೆ ಹಾಕಿಸಿಕೊಂಡು ಎಚ್ಚರವಾಗಿರಿ ಎಂದು ಆರೋಗ್ಯ ಸಚಿವ ಸುಧಾಕರ್ ಮನವಿ ಮಾಡಿಕೊಂಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ದೆಹಲಿಯಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗುತ್ತಿವೆ. ಇನ್ನು ಕೆಲವು ರಾಜ್ಯದಲ್ಲೂ ಕೋವಿಡ್ ಹೆಚ್ಚುತ್ತಿದೆ. ಇದನ್ನ ಗಮನದಲ್ಲಿ ಇಟ್ಟುಕೊಂಡೇ ರಾಜ್ಯದಲ್ಲಿ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸುಧಾಕರ್ ಹೇಳಿದರು. ಜನರಿಗೆ ಮಾಸ್ಕ್ ಧರಿಸಲು ಹಾಗೂ ಮೂರನೇ ಡೋಸ್ ಪಡೆಯಲು ಸೂಚಿಸಲಾಗಿದೆ. ಆದರೆ, 29 ರಿಂದ 30 ಲಕ್ಷ ಜನ ಇನ್ನೂ ಎರಡನೇ ಡೋಸ್ ಪಡೆದೇ ಇಲ್ಲ ಅಂತಲೇ ಬೇಸರ ವ್ಯಕ್ತಪಡಿಸಿದರು.