ರೋಹಿತ್ ರಿಂಕು ಆರ್ಭಟ ಅಫ್ಘಾನ್‌ಗೆ 213 ಟಾರ್ಗೆಟ್

ಬೆಂಗಳೂರು : ಇಂದು ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರೋ ಕೊನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ, ಅಫ್ಘಾನಿಸ್ತಾನ ತಂಡಗಳು ಮುಖಾಮುಖಿಯಾಗಿವೆ.
ಇನ್ನು, ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಅಫ್ಘಾನ್‌ಗೆ 213 ಟಾರ್ಗೆಟ್ ಕೊಟ್ಟಿದೆ. ಟೀಂ ಇಂಡಿಯಾಗೆ ಆರಂಭಿಕ ಆಘಾತ ಕಾದಿತ್ತು. ಆರಂಭದಲ್ಲೇ ಟೀಂ ಇಂಡಿಯಾ ಸಾಲು ಸಾಲು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ಬಳಿಕ ನಾಯಕ ರೋಹಿತ್ ಶರ್ಮಾ(121) ಭರ್ಜರಿ ಶತಕ ಸಿಡಿಸಿದರು. ಮೊದಲ ಬ್ಯಾಟಿಂಗ್ ನಡೆಸಿದ ಭಾರತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 212 ರನ್ ಗಳಿಸಿದೆ. ಈ ಮೂಲಕ ಅಫ್ಘಾನ್‌ಗೆ 213 ರನ್ ಟಾರ್ಗೆಟ್ ನೀಡಿದೆ. 22 ರನ್ ಗಳಿಗೆ 4 ವಿಕೆಟ್ ಸಂಕಷ್ಟದಲ್ಲಿದ್ದ ಭಾರತಕ್ಕೆ ಹಿಟ್ ಮ್ಯಾನ್ ಜೊತೆಗೂಡಿದ ರಿಂಕು ಸಿಂಗ್ ( 69) ಅರ್ಧ ಶತಕ ಸಿಡಿಸಿದರು.
ಅಫ್ಘಾನ್ ಪರ ಫರೀದ್ ಮಲಿಕ್ - 3 ಮತ್ತು ಅಜ್ಮತುಲ್ಲಾ1 ವಿಕೆಟ್ ಪಡೆದರು.