ಚಾಕು ಚುಚ್ಚಿ ಮೊಬೈಲ್ ಹಣ ಸುಲಿಗೆ: ಪ್ರಕರಣ ದಾಖಲು

ಚಾಕು ಚುಚ್ಚಿ ಮೊಬೈಲ್ ಹಣ ಸುಲಿಗೆ: ಪ್ರಕರಣ ದಾಖಲು

ಹುಬ್ಬಳ್ಳಿ : ಚಲಿಸುತ್ತಿದ್ದ ರೈಲಿನಲ್ಲಿ ಪ್ರಯಾಣಿಕರೊಬ್ಬರಿಗೆ ಚಾಕುವಿನಿಂದ ಚುಚ್ಚಿ, ಅವರ ಬಳಿ ಇದ್ದ 9,800 ರೂ, ಮೌಲ್ಯದ ಮೊಬೈಲ್ ಫೋನ್ ಹಾಗೂ 1300 ರೂ. ಹಣ ಸುಲಿಗೆ ಮಾಡಿರುವ ಕುರಿತು ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಧಾರವಾಡದ ಗಾಂಧಿನಗರ ಲಕ್ಕಮನಹಳ್ಳಿ ನಿವಾಸಿ ಆರ್.ಜೆ. ಬೆಟಸೂರ ಹಲ್ಲೆಗೀಡಾದವರು, ಬೆಟಸೂರ ಅವರು ಫೆ.22 ರಂದು ರಾತ್ರಿ ಬೆಳಗಾವಿ- ಬೆಂಗಳೂರು ರೈಲಿನಲ್ಲಿ ಬೆಂಗಳೂರಿಗೆ ಹೊರಟಿದ್ದ ವೇಳೆ ಈ ಘಟನೆ ನಡೆದಿದೆ. ಸದ್ಯ ಗಾಯಾಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.