ವಯಸ್ಕರಿಗೆ 2ನೇ ಡೋಸ್ ಲಸಿಕೆ ನೀಡಿಕೆಯಲ್ಲಿ ರಾಜ್ಯಕ್ಕೆ 3ನೇ ಸ್ಥಾನ

ವಯಸ್ಕರಿಗೆ 2ನೇ ಡೋಸ್ ಲಸಿಕೆ ನೀಡಿಕೆಯಲ್ಲಿ ರಾಜ್ಯಕ್ಕೆ 3ನೇ ಸ್ಥಾನ

ಬೆಂಗಳೂರು: ಹೆಮ್ಮಾರಿ ಸೋಂಕಿನ ಜೊತೆಗೆ ಒಮಿಕ್ರಾನ್ ಎಂಬ ರೂಪಾಂತರ ವೈರಸ್ ಜನರ ನೆಮ್ಮದಿ ಕಸಿಯುತ್ತಿದೆ.ಇದರ ಮಧ್ಯೆ ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ಆತಂಕ ಶುರುವಾಗಿದೆ. ಕೊರೊನಾ ವಿರುದ್ಧ ಹೋರಾಡಲು ಇರುವ ಅಸ್ತ್ರವೆಂದರೆ ಲಸಿಕೆ . ಲಸಿಕೆ ಪಡೆದವರು ಕೊರೊನಾದಿಂದ ಪಾರಾಗಬಹುದು. ಹೀಗಾಗಿ ಪ್ರತಿಯೊಬ್ಬರು ಕಡ್ಡಾಯವಾಗಿ ವ್ಯಾಕ್ಸಿನ್ ಪಡೆಯಬೇಕು ಅಂತ ಸರ್ಕಾರ ತಿಳಿಸಿದೆ. 

 

ಈ ನಡುವೆ ಕೊರೊನಾ ವಿರುದ್ಧದ ಹೋರಾಟದಲ್ಲಿ ರಾಜ್ಯದಲ್ಲಿ ಮತ್ತೊಂದು ಮೈಲಿಗಲ್ಲು ಸೃಷ್ಟಿಯಾಗಿದ್ದು, ವಯಸ್ಕರಿಗೆ 2ನೇ ಡೋಸ್ ನೀಡಿಕೆಯಲ್ಲಿ ದೇಶದಲ್ಲೇ ರಾಜ್ಯ 3ನೇ ಸ್ಥಾನ ಪಡೆದಿದೆ. ಇಡೀ ದೇಶದಲ್ಲಿ ವಯಸ್ಕರಿಗೆ 2ನೇ ಡೋಸ್ ನೀಡಿಕೆಯಲ್ಲಿ ಕರ್ನಾಟಕ ರಾಜ್ಯ ಮೂರನೇ ಸ್ಥಾನದಲ್ಲಿದೆ ಅಂತ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಮಾಹಿತಿ ನೀಡಿದ್ದಾರೆ. 

 

ಟ್ವೀಟ್ ಮಾಡಿರುವ ಸಚಿವರು, ರಾಜ್ಯದಲ್ಲಿ ವಯಸ್ಕರ ಪೈಕಿ ಶೇ.80 ಮಂದಿಗೆ ಎರಡೂ ಡೋಸ್ ವ್ಯಾಕ್ಸಿನ್ ನೀಡಲಾಗಿದೆ. ಡೋಸ್ ನೀಡಿಕೆಯಲ್ಲಿ ರಾಜ್ಯಕ್ಕೆ 3ನೇ ಸ್ಥಾನ ಎಂದು ತಿಳಿಸಿದ್ದಾರೆ.