ಬೆಂಗಳೂರು-ಕಾರವಾರ ರೈಲಿಗೆ 3 ಹೆಚ್ಚುವರಿ ಬೋಗಿ

ಬೆಂಗಳೂರು-ಕಾರವಾರ ರೈಲಿಗೆ 3 ಹೆಚ್ಚುವರಿ ಬೋಗಿ

ಮಂಗಳೂರು:ಪ್ರಯಾಣಿಕರ ಅಧಿಕ ಒತ್ತಡದ ಕಾರಣ ಕಾರವಾರ- ಬೆಂಗಳೂರು ನಡುವೆ ಸಂಚರಿಸುವ ಕೆಎಸ್‌ಆರ್ ಬೆಂಗಳೂರು- ಕಾರವಾರ . ಎಕ್ಸ್‌ಪ್ರೆಸ್ ರೈಲಿಗೆ (ನಂ.16595/16596) ತಾತ್ಕಾಲಿಕ ನೆಲೆಯಲ್ಲಿ ಮೂರು ಹೆಚ್ಚುವರಿ ಎಸಿ ಬೋಗಿಗಳನ್ನು ಸೇರ್ಪಡೆಗೊಳಿಸಲು ಕೊಂಕಣ ರೈಲ್ವೆ ನಿರ್ಧರಿಸಿದೆ. 

ನ.2ರಿಂದ ಈ ರೈಲು ಎರಡು 3ಟಯರ್ ಎಸಿ ಬೋಗಿ ಹಾಗೂ ಒಂದು 2ಟಯರ್‌ ಎಸಿ ಬೋಗಿಯೊಂದಿಗೆ ಸಂಚರಿಸಲಿದೆ. ಹೀಗಾಗಿ ಇದುವರೆಗೆ 14 ಬೋಗಿಗಳೊಂದಿಗೆ ಸಂಚರಿಸುತಿದ್ದ ಈ ರೈಲು, ಇನ್ನು ಒಟ್ಟು 17 ಬೋಗಿ ಗಳೊಂದಿಗೆ ಓಡಾಟ ನಡೆಸಲಿದೆ ಎಂದು ಪ್ರಕಟಣೆ ತಿಳಿಸಿದೆ. 

ಕಾರವಾರದಿಂದ ಈ ರೈಲನ್ನು ತಾತ್ಕಾಲಿಕವಾಗಿ ಮಡಗಾಂವ್ ಜಂಕ್ಷನ್ ವರೆಗೆ ಓಡಿಸಲಾಗುತ್ತದೆ ಎಂದೂ ಪ್ರಕಟನೆ ತಿಳಿಸಿದೆ. 

ಪ್ರಯಾಣಿಕರ ದಟ್ಟಣೆಯಿಂದ ಉದ್ನಾ ಹಾಗೂ ಮಂಗಳೂರು ಜಂಕ್ಷನ್ ನಡುವೆ ಸಂಚರಿಸುವ ವಿಶೇಷ ರೈಲಿಗೂ ನ.3ರಿಂದ ತಾತ್ಕಾಲಿಕವಾಗಿ ಒಂದು ಹೆಚ್ಚುವರಿ ಸ್ವೀಪರ್ ಕೋಚ್‌ ನ್ನು ಸೇರ್ಪಡೆಗೊಳಿಸಲಾಗುವುದು ಎಂದೂ ಕೊಂಕಣ ರೈಲ್ವೆ ಪ್ರಕಟನೆಯಲ್ಲಿ ತಿಳಿಸಲಾಗಿದೆ.