ವಿರೋಧ ಪಕ್ಷವಿಲ್ಲದ ನಾಗಾಲ್ಯಾಂಡ್ - ಎನ್‌ಡಿಪಿಪಿ-ಬಿಜೆಪಿ ಮೈತ್ರಿಗೆ ಉಳಿದ ಪಕ್ಷಗಳು ಬೆಂಬಲ

ವಿರೋಧ ಪಕ್ಷವಿಲ್ಲದ ನಾಗಾಲ್ಯಾಂಡ್ - ಎನ್‌ಡಿಪಿಪಿ-ಬಿಜೆಪಿ ಮೈತ್ರಿಗೆ ಉಳಿದ ಪಕ್ಷಗಳು ಬೆಂಬಲ

ಕೊಹಿಮಾ : ನಾಗಾಲ್ಯಾಂಡ್‌ನಲ್ಲಿ ಈಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಪಿಪಿ-ಬಿಜೆಪಿ ಮೈತ್ರಿಕೂಟ ಬಹುಮತದೊಂದಿಗೆ ಜಯದ ನಗೆ ಬೀರಿದೆ. ಎನ್‌ಡಿಪಿಪಿ-ಬಿಜೆಪಿ ಮೈತ್ರಿಕೂಟಕ್ಕೆ ಇತರೆ ಪಕ್ಷಗಳು ಸಹ ಬೆಂಬಲ ಸೂಚಿಸಿದ್ದು, ನಾಗಾಲ್ಯಾಂಡ್‌ನಲ್ಲಿ ವಿರೋಧ ಪಕ್ಷವೇ ಇಲ್ಲದಂತಾಗಿದೆ. 

ಮಾರ್ಚ್ 2 ರಂದು ನಾಗಾಲ್ಯಾಂಡ್‌ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಯಿತು. ಸದನದ ಒಟ್ಟು ಸದಸ್ಯ ಬಲ 60. ಈ ಬಾರಿ ಚುನಾವಣೆಯಲ್ಲಿ ಎನ್‌ಡಿಪಿಪಿ-ಬಿಜೆಪಿ ಮೈತ್ರಿಕೂಟ 37 ಸ್ಥಾನಗಳಲ್ಲಿ ಜಯಭೇರಿ ಬಾರಿಸಿತು. ಕ್ರಮವಾಗಿ 25 ಮತ್ತು 12 ಸ್ಥಾನಗಳ ಗೆಲುವು ಸಾಧಿಸಿದವು. ಆ ಮೂಲಕ ಸರ್ಕಾರ ರಚನೆಗೆ ಸಿದ್ಧತೆ ನಡೆಸಿವೆ.