ರಾಜ್ಯದಲ್ಲಿ ಇಂದು ಮೋದಿ ಮಿಂಚಿನ ಸಂಚಾರ

ರಾಜ್ಯದಲ್ಲಿ ಇಂದು ಮೋದಿ ಮಿಂಚಿನ ಸಂಚಾರ

ಬೆಂಗಳೂರು: ಚುನಾವಣೆ ಘೋಷಣೆ ಹೊಸ್ತಿಲಲ್ಲೇ ಪ್ರಧಾನಿ ಮೋದಿ ಬ್ಯಾಕ್ ಟು ಬ್ಯಾಕ್ ರಾಜ್ಯ ಪ್ರವಾಸ ಕೈಗೊಳ್ತಿದ್ದಾರೆ. ಇಂದು ಬೆಂಗಳೂರು, ತುಮಕೂರಿನಲ್ಲಿ ಜರುಗಲಿರೋ ಸಾಲು ಸಾಲು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಮೋದಿ ಚಾಲನೆ ನೀಡಲಿದ್ದಾರೆ. 

ನಮೋ ರಾಜ್ಯ ಪ್ರವಾಸ, ಬಿಜೆಪಿ ಪಾಳೇಯಕ್ಕೆ ಉತ್ಸಾಹ ತಂದೊಡ್ಡಿದೆ. ರಾಜ್ಯ ಪ್ರವಾಸ ಕೈಗೊಳ್ಳುತ್ತಿರುವ ಮೋದಿ, ಬೆಂಗಳೂರು ಮತ್ತು ತುಮಕೂರಿನಲ್ಲಿ ಜರುಗಲಿರುವ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಬೆಳಗ್ಗೆ 11.30ಕ್ಕೆ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ 2023ರ ಇಂಧನ ಸಪ್ತಾಹವನ್ನು ಉದ್ಘಾಟಿಸಲಿದ್ದಾರೆ. 

ಫೆಬ್ರವರಿ 8ರವರೆಗೆ ಐಇಡಬ್ಲ್ಯೂ ಕಾರ್ಯಕ್ರಮ ಆಯೋಜನೆಗೊಂಡಿದೆ. ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ, ಜಾಗತಿಕ ತೈಲ ಮತ್ತು ಅನಿಲ ವಲಯದ ಸಿಇಒಗಳ ಜೊತೆ ಸಂವಾದ ನಡೆಸಲಿದ್ದಾರೆ. ಇದಾದ ನಂತರ ಹಸಿರು ಸಾಗಣೆ ಜಾಥಾಗೆ ಚಾಲನೆ ನೀಡಲಿದ್ದಾರೆ. ಬಳಿಕ ಶೀಶೆ ರಹಿತ ಉಪ ಕ್ರಮದಡಿ ಸಮವಸ್ತ್ರಗಳನ್ನು ಬಿಡುಗಡೆ ಕಾರ್ಯಕ್ರಮ ಇದೆ. ನಂತರ ಭಾರತೀಯ ತೈಲ ನಿಮಗದ ಅವಳಿ ಕುಕ್ ಟಾಪ್ ಮಾದರಿ ಲೋಕಾರ್ಪಣೆ ನಡೆಯಲಿದೆ. 

ಬೆಂಗಳೂರು ಬಳಿಕ ಪ್ರಧಾನಿ ಮೋದಿ, ತುಮಕೂರಿಗೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 3.30ಕ್ಕೆ ತುಮಕೂರಿನಲ್ಲಿ HAL ಹೆಲಿಕಾಪ್ಟರ್ ಕಾರ್ಖಾನೆ ಉದ್ಘಾಟಿಸಲಿದ್ದಾರೆ. ಈ ವೇಳೆ ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ.